Essay
ನದಿ ನೀರಿನ ವಿವಾದಗಳು- ಶಾಶ್ವತ ಪರಿಹಾರಗಳ ಅರಸುವಿಕೆಯಲ್ಲಿ
    "ಜಲ ಜಗತ್ತಿಗೆ ಅವಶ್ಯಕ ಮಾತ್ರವಲ್ಲ, ಜಲವೇ ಜಗತ್ತಿಗೆ ಜೀವ"- ಈ ಮಾತು ಎಲ್ಲರೂ ಒಪ್ಪುವುದು ಸರಿಯಷ್ಟೇ. ಇಂತಹ ಜೀವ ನಾಡಿಯ ಸುತ್ತ ಇರುವ ಮಾನವ ನಿರ್ಮಿತ ವಿವಾದಗಳು ಮತ್ತು ಒದಗಿಸಬಹುದಾದ ಶಾಶ್ವತ ಪರಿಹಾರಗಳತ್ತ ನಮ್ಮ ಚಿತ್ತ. ಜಗತ್ತಿನಾದ್ಯಂತ ರಾಷ್ಟ್ರ-ರಾಷ್ಟ್ರಗಳ ನಡುವೆ, ರಾಜ್ಯ-ರಾಜ್ಯಗಳ ನಡುವೆ - ಹಲವಾರು ಹಂಚಿಕೆಯ ವಿವಾದಗಳಿವೆ. ಈ ವಿವಾದಗಳನ್ನು ಬಗೆಹರಿಸುವ ಸಲುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಸಮ್ಮೇಳನಗಳು ಸಾಗುತ್ತಿವೆ. ಸ್ಟಾಕ್ ಹೋಮ್‍ನಲ್ಲಿ ನಡೆದ ಸಮ್ಮೇಳನದಲ್ಲಿ ಲೆಸ್ಟರ್.ಆರ್.ಬ್ರೌನ್‍ರವರು ಹೀಗೆಂದರು-"ಮುಂದಿನ ಮಹಾಯುದ್ಧ ನಡೆಯುವುದಾದರೆ, ಅದು ನೀರಿಗಾಗಿ" –ಎಂದು. ಯುದ್ಧಗಳನ್ನು, ಕಾರಣವೇನೇ ಇರಲಿ, ತಡೆಯುವುದುಎಷ್ಟು ಮುಖ್ಯವೋ, ನೀರಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಅಷ್ಟೇಮುಖ್ಯ ಮತ್ತು ಅನಿವಾರ್ಯ.ಭೂಮಿಯ ಬಹು ಭಾಗ ಜಲಾವೃತವೇಆಗಿದ್ದರೂ ಸಹ, ಬಳಸಲುಯೋಗ್ಯವಾದ ನೀರಿನ ಪೂರೈಕೆಯಾಗುತ್ತಿಲ್ಲ. ಜಗತ್ತಿನಾದ್ಯಂತದ ಪ್ರದೇಶದಲ್ಲಿ ಸುಧಾರಿತಯೋಗ್ಯ ಕುಡಿಯುವ ನೀರಿಗೆ 11% ದಷ್ಟುಜನರುದೂರವೇ ಉಳಿದಿದ್ದಾರೆ. ಜಲ ವಿವಾದಗಳಿಗೆ ಕಾರಣವೆಂದರೆ ಸೀಮಿತ ಲಭ್ಯತೆ ಅದುಕೃಷಿ ಇರಲಿ, ಮೀನುಗಾರಿಕೆ ಆಗಲಿ, ಉತ್ಪಾದನೆಯೇ ಆಗಲಿ, ಹರ್ಷೋಲ್ಲಾಸ ಆಗಿರಲಿ ಅಥವಾ ಪ್ರವಾಸೋದ್ಯಮ ವಿಷಯವಾಗಲಿ, ಎಲ್ಲದರಲ್ಲಿಯೂ ಜಲವೇಜೀವ.
   ಜಗತ್ತಿನ ನಾಗರೀಕತೆಗಳಲ್ಲಿವೂ ನದೀತೀರದಲ್ಲೇ ಉಗಮವಾಗಿರುವುದು ಅರಿಯದ ವಿಷಯವೇನಲ್ಲ. ನಾಗರೀಕತೆಯತೊಟ್ಟಿಲುಗಳೆಂದೇ ಕರೆಯಲ್ಪಡುವ ಆರು ನಾಗರೀಕತೆಗಳೆಂದರೆ ಈಜಿಷ್ಟ್, ಮೆಸೊಪೊಟೋಮಿಯಾ, ಸಿಂಧೂಕಣಿವೆ, ಚೀನಾ, ಮೆಕ್ಸಿಕೊ ಮತ್ತು ಪೆರು. ಸಿಂಧೂಕಣಿವೆ ನಾಗರೀಕತೆ ಹೆಸರೇ ಸೂಚಿಸುವಂತೆ ಸಿಂಧೂ ನದಿಯ ದಡದಲ್ಲಿ ಉಗಮವಾಯಿತು. ಮಾನವನ ನಮೂದಿತ ಇತಿಹಾಸ ಆರಂಭವಾಗುತ್ತಿದ್ದಂತೆ, ಅಭಿವೃದ್ಧಿ ಮತ್ತು ವಿವಾದಗಳು  ಹಾಸುಹೊಕ್ಕಾಗಿಯೇ ನಡೆದುಬಂದಿವೆ. ಇತ್ತೀಚಿನ ದಿನಗಳ ಕೆಲವು ವಿವಾದಗಳು ಮತ್ತು ಶಾಶ್ವತ ಪರಿಹಾರದತ್ತ ಸರಿಯಾದ ಪೀಟಿಕೆಯ ಒಂದು ಸಂಕ್ಷಿಪ್ತಚರ್ಚೆಇಂತಿದೆ.
ಭಾರತ ಮತ್ತು ಇತರರಾಷ್ಟ್ರಗಳ ನಡುವಿನ ಪ್ರಮುಖ ನದೀ ನೀರಿನ ವಿವಾದಗಳೆಂದರೆ ಪಾಕೀಸ್ತಾನದೊಡನೆ ಇರುವ ಸಿಂಧೂ ನದೀ ವಿವಾದ ಹಾಗು ಚೀನಾದೊಡನೆ ಇರುವ ಬ್ರಹ್ಮಪುತ್ರ ನದೀ ವಿವಾದ. ರಾಷ್ಟ್ರ-ರಾಷ್ಟ್ರಗಳ ನಡುವಿನ ವಿವಾದಗಳನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಹಾಗು ಹಲವು ನ್ಯಾಯಾಧೀಕರಣಗಳು ಬಗೆಹರಿಸುತ್ತವೆ.
ಭಾರತದಲ್ಲಿ ನದೀ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಹಲವುರಾಜ್ಯಗಳ ನಡುವೆ ವಿವಾದಗಳಿವೆ.ಇಂದು ನದೀ ನೀರಿನ ವಿವಾದಗಳು ಭಾರತೀಯ ಒಕ್ಕೂಟದಲ್ಲಿ ಸಾಂಕ್ರಾಮಿಕ ಪಿಡುಗಿನಂತೆ, ರಾಜಕೀಯ ಪಿಡುಗಾಗಿ ಹರಡುತ್ತಿದೆ.ರಾಜ್ಯಗಳ ನಡುವಿನ ಸಂಬಂಧಗಳನ್ನುಅಡ್ಡಗಟ್ಟುತ್ತಿವೆ.
ಅಂತರ್-ರಾಜ್ಯ ವಿವಾದ ಇಂದಿನ ಭಾರತೀಯ ಸಂಯುಕ್ತ ವ್ಯವಸ್ಥೆಯಲ್ಲಿ ಅತ್ಯಂತ ಗಂಭೀರವಾದ ವಿಷಯವಾಗಿದೆ. ವಿವಿಧ ರಾಜ್ಯಗಳ ನಡುವಿನ ಸಂಭಂದವನ್ನು ಕಡಿತಗೊಳಿಸುವ ಹಾಗೆ ಇದಕ್ಕೆ ಪ್ರಮುಖ ಉದಾಹರಣೆ ಕಾವೇರಿ ನೀರಿನ ವಿವಾದ. 1991ರ ಜೂನ್ 25ರಂದು ಕಾವೇರಿ ನ್ಯಾಯ ಮಂಡಳಿಯು ಮಧ್ಯಂತರ ಆದೇಶ ಹೊರಡಿಸಿದಾಗ ಅದರ ವಿರುದ್ದ ಬಂಗಾರಪ್ಪ ನೇತೃತ್ವದ ಅಂದಿನ ಸರ್ಕಾರ, ಸಂವಿಧಾನದ ಕಲಂ 213 ರ ಅಡಿ ‘ಕರ್ನಾಟಕ ಕಾವೇರಿ ಸಂರಕ್ಷಣಾ ಸುಗ್ರೀವಾಜ್ಞೆ-1991 ಅನ್ನು ಹೊರಡಿಸಿ ನ್ಯಾಯಮಂಡಳಿಯ ಆದೇಶವನ್ನು ಅನೂರ್ಜಿತಗೊಳಿಸಿತ್ತು. ಆದರೆ ಸಂವಿಧಾನದ ಕಲಂ 13(3)(ಎ) ಪ್ರಕಾರ ಸುಗ್ರೀವಾಜ್ಞೆಯು ಕಾನೂನಿನ ವ್ಯಾಖ್ಯಾನದಡಿ ಬರುವುದರಿಂದ ಅಂತರರಾಜ್ಯ ಜಲ ವಿಷಯಕ್ಕೆ ಸಂಭಂದಿಸಿದಂತೆ ಸಂಸತ್ತಿಗೆ ಕಾನೂನು ಮಾಡುವ ಅಧಿಕಾರವಿರುತ್ತದೆ. ಸಂಯುಕ್ತ ರಾಜ್ಯ ಪದ್ದತಿಗೆ ಅನುಗುಣವಾಗಿ ಸಂವಿಧಾನವು ಕೇಂದ್ರ – ರಾಜ್ಯಗಳ ನಡುವೆ ಅಧಿಕಾರಗಳನ್ನು ಹಂಚಿಕೊಟ್ಟಿದೆ.ಅದರಲ್ಲಿ ಜಲವು (ನೀರಾವರಿ ಆಯಾ ರಾಜ್ಯ ಪಟ್ಟಿಯಲ್ಲಿ ಸೇರಿದೆ ರಾಜ್ಯ ಪಟ್ಟಿಯಲ್ಲಿ 61 ವಿಷಯಗಳಿದ್ದು ರಾಜ್ಯ ಶಾಸಕಾಂಗಗಳಿಗೆ ಸ್ವತಂತ್ರವಾಗಿ ಈ ವಿಷಯಗಳ ಬಗ್ಗೆ ಕಾನೂನು ರಚಿಸುವ ಅಧಿಕಾರವಿದೆ. ಕರ್ನಾಟಕದಲ್ಲಂತೂ ನದಿಗಳ ನೀರು ಅನುಭವಿಸುವುದಕ್ಕಿಂತಲೂ ಅದರ ಸಂಬಂಧಿತ ಹೋರಾಟದಲ್ಲೇದಶಕಗಳು ಸಂದಿವೆ. ಕಾವೇರಿ, ಕೃಷ್ಣ ಅಥವಾ ಮಹದಾಯಿ- ವಿವಾದಗಳ ಸುಳಿ ಕರ್ನಾಟಕಕ್ಕೆ ಭರಿಸಲುಕಷ್ಟ ಸಾಧ್ಯವಾಗುವಂತಹ ವಿಚಾರಗಳಾಗಿವೆ. ವಿವಾದಕ್ಕೆ ವಿಷಯ ನೀರು ಹಂಚಿಕೆಯೋ, ಅಣೆಕಟ್ಟು ನಿರ್ಮಾಣವೋ ಅಥವಾ ಯೋಜನೆಗಳನ್ನು ರೂಪಿಸುವುದೊ - ನೀರಿನ ಹಾದಿ ಕರ್ನಾಟಕಕ್ಕೆ ಎಂದೂ ಸುಗಮವಾಗಿಲ್ಲ.ಕರ್ನಾಟಕಕ್ಕೆ ಕುಡಿಯುವ ನೀರು, ನೀರಾವರಿ ಅತ್ಯವಶ್ಯಕವಾಗಿದ್ದರೂ, ಬಹು ಮಟ್ಟಿಗೆ ರಾಜಕೀಯವಾಗಿಸುತ್ತಿರುವುದು ವಿಷಾದನೀಯ.
 ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕದಲ್ಲಿ ಬ್ರಿಟಷ್ ಆಳ್ವಿಕೆ ಅಡಿಯಲ್ಲಿ ಮದ್ರಾಸು ಪ್ರಾಂತ್ಯ ಮತ್ತು ಮೈಸೂರುರಾಜ್ಯಗಳ ನಡುವೆ 1892ರಲ್ಲಿಯೇ ಕಾವೇರಿ ನದೀ ವಿವಾದಆರಂಭವಾಯಿತು. 1910ರಲ್ಲಿ ಎರಡೂ ಪ್ರಭುತ್ವಗಳು ಸಮಸ್ಯೆಯ ಪರಿಹಾತ್ಮಕ ನಡೆಗಳಲ್ಲಿ ಕಾವೇರಿ ನದಿಗೆಅಣೆಕಟ್ಟಿನ ನಿರ್ಮಾಣ ಯೋಜನೆಯನ್ನು ಆರಂಭಸಿದರು. ಬ್ರಿಟಿಷ್ ಅಧ್ಯಕ್ಷತೆಯಲ್ಲಿ ಯಾರಿಗೆ ಎಷ್ಟು ನೀರೆಂಬುದು ನಿರ್ಧರಿಸಿದರು, 
  1924ರಲ್ಲಿ ಕೃಷ್ಣರಾಜಸಾಗರ ಅಣೆಕಟ್ಟು ಕಟ್ಟಲು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಆ ಒಪ್ಪಂದದದ ಒಂದು ಷರತ್ತಿನ ಅನ್ವಯ, ಐದು ದಶಕಗಳ ನಂತರ ಪುನಃ ಪರಿಶೀಲನೆ ಮಾಡಬಹುದೆಂದು ಬರೆಯಲಾಗಿದೆ. ಕಾವೇರಿ ನದಿ ಕರ್ನಾಟಕ ಹಾಗು ತಮಿಳುನಾಡಿನಾದ್ಯಂತ ಹರಿವು ಹೊಂದಿದೆ.ಇವರೆಡು ರಾಜ್ಯಗಳ ನಡುವೆ ಮಾತ್ರವಲ್ಲದೆ ಕೇರಳ ಹಾಗು ಪುದುಚರಿಯ ಪ್ರದೇಶವನ್ನೂ ಒಳಗೊಂಡಿದೆ.ಈ ರಾಜ್ಯ ವಿಭಜನೆ, ಸ್ವಾತಂತ್ರ್ಯಾ ನಂತರದ ಭೌಗೋಳಿಕ ವಿಭಜನೆಯಾಗಿದೆ. ಎಷ್ಟೇ ಹೋರಾಟ ನಡೆದರೂ ನಿಲ್ಲದ ಕಾವು ಏರುತ್ತಲೇ ಇದೆ, ಕಾವೇರಿ ನದಿಯನ್ನು ಅರ್ಥತ್ ಪ್ರಾಣ ಜಲವಾಗಿಸಿದೆ.
ಇದಾಯಿತೆಂದರೆ ಮಹಾದಾಯಿ ಇತ್ತೀಚೆಗೆ ಕರ್ನಾಟಕಕ್ಕೆ ತಟ್ಟಿರುವ ಜಲಕಾವು.ಕರ್ನಾಟಕದ ಉತ್ತರ ಭಾಗದಲ್ಲಿರುವ ಪ್ರದೇಶಗಳಲ್ಲಿ ಇದಕ್ಕೆ ಸಂಬಂಧಿಸಿದ ಮಹಾದಾಯಿ–ಕಳಸಾ- ಬಂಡೂರಿ-ನಾಲಾ ಹೋರಾಟ ಸಾಗುತ್ತಲೇಇದೆ. ಹೆಚ್ಚು ಕಾಳಜಿ ವಹಿಸಿ ಒತ್ತಾಯಿಸುವ ಜನಪ್ರತಿನಿಧಿಗಳ ಕೊರತೆ ಕರ್ನಾಟಕವನ್ನು ಅನ್ಯಾಯ ಅನುಭವಿಸುವಂತೆ ಮಾಡಿದೆ. ನಾವುಇದರ ಪುನಃಪರಿಶೀಲನೆ ಮತ್ತು ನೂತನ ಹಾದಿಯಲ್ಲಿ ಕೂಲಂಕುಷಚಿಂತನೆ ನಡೆಸುವುದು ಅವಶ್ಯಕವಾಗಿದೆ.
  ಇತಿಹಾಸವನ್ನೊಮ್ಮೆ ನೋಡಿದಾಗ, ಬ್ರಿಟಿಷ್ ಆಳ್ವಿಕೆಯಲ್ಲಿ ಅದು ಕೇಂದ್ರ ಪಟ್ಟಿಯಲ್ಲಿದ್ದಿತು ಮತ್ತು ಕೇಂದ್ರವೇ ಬಗೆಹರಿಸುತ್ತಿತ್ತು. ನಂತರ, ಸಂವಿಧಾನಾತ್ಮಕ ಸಭೆ ಮುಂದೊಂದು ದಿನ ನೀರಿನ ವಿವಾದಗಳು ಉದ್ಭವಿಸಬಹುದೆಂಬುದನ್ನು ಮನಗಂಡು, ಸಂವಿಧಾನದ 262ನೇ ವಿಧಿಯಲ್ಲಿ ಒಂದು ನಿರ್ದಿಷ್ಟನಿಯಮವನ್ನು ರೂಪಿಸಿತು. ಇಂತಹ ವಿವಾದಗಳನ್ನು ಪರಿಹರಿಸುವ ಸಲುವಾಗಿ 1956ರಲ್ಲಿ ಅಂತರ-ರಾಜ್ಯ ನದೀ ನೀರು ವಿವಾದ ಪರಿಹಾರಗಳಕಾಯ್ದೆ
(
Inter-state river water disputes Act-1956-1956) ಯನ್ನುಜಾರಿಗೊಳಿಸಲಾಯಿತು.
ಜಲ ವಿವಾದಗಳನ್ನು ಸಂಬಂಧಿಸಿದಂತೆ, ಸಂವಿಧಾನಾತ್ಮ ನಿರ್ದೇಶನಗಳುಇಂತಿವೆ:
*ಸಂಸತ್ತು ಕಾನೂನಾತ್ಮಕವಾಗಿ ಯಾವುದೇ ಅಂತರ-ರಾಜ್ಯ ನದೀ ಅಥವಾ ನದೀ ಕಣಿವೆಯ ಬಳಕೆ ಹಂಚಿಕೆ ಅಥವಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತೀರ್ಪನ್ನು ನೀಡಬಹುದು. ಜ್ಞಾನ ಸಂಸತ್ತು ಕಾನೂನಾತ್ಮಕವಾಗಿ ಯಾವುದೇ ಅಂತರ-ರಾಜ್ಯ ನದೀ ಅಥವಾ ನದೀ ಕಣಿವೆಯ ಬಳಕೆ, ಹಂಚಿಕೆ ಅಥವಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿವಾದ ಅಥವಾದೂರಿಗೆ ಸಂಬಂಧಿಸಿದಂತೆ; ಯಾವುದೇ ಸರ್ವೋಚ್ಛ ನ್ಯಾಯಾಲಯ ಹಸ್ತವನ್ನುಚಾಚಬಾರದೆಂದು ಅನುಮತಿಸಬಹುದು.
*ಪ್ರಸ್ತುತ ನೀರು, ರಾಜ್ಯ ಪಟ್ಟಿಯಲ್ಲಿನ 17ನೇ ವಿಷಯವಾಗಿದೆ. ಇದರಲ್ಲಿ ನೀರು ಸರಬರಾಜು, ನೀರಾವರಿ, ಕಾಲುವೆ, ಶೇಖರಣೆ ಮತ್ತು ಶಕ್ತಿ ಉತ್ಪಾದನೆಗೆ ಸಂಬಂಧಿಸಿದ ಅಧಿಕಾರ ರಾಜ್ಯ ಸರ್ಕಾರಕ್ಕೇ ಸೇರಿದ್ದು.
*ಸಾರ್ವಜನಿಕ ಹಿತಾಸಕ್ತಿಯಲ್ಲಿ, ಕೇಂದ್ರ ಪಟ್ಟಿಯಲ್ಲಿನ 56ನೇ ವಿಷಯವು, ಕೇಂದ್ರ ಸರ್ಕಾರದ ವಿಷಯವಲ್ಲದಿದ್ದರೂ ಸಹ, ಅಂತರ-ರಾಜ್ಯ ನದಿಗಳ ಅಥವಾ ನದೀಕಣಿವೆಗಳ ನಿಯಂತ್ರಣ ಮತ್ತುಅಭಿವೃದ್ಧಿಗೆ ನಿಯಮಿಸಲೂ ಬಹುದು ಮತ್ತು ಸಹಕರಿಸಲೂ ಬಹುದುಎಂದುಅನುವುಮಾಡಿದೆ.
ಇಂತಹ ವಿವಾದಗಳನ್ನು ಬಗೆ ಹರಿಸಲು ಭಾರತದಲ್ಲಿ, ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಇನ್ನೊಬ್ಬ ಉಪಸ್ಥಿತ ನ್ಯಾಯಾಧೀಶರುಹಾಗು ಸರ್ವೋಚ್ಛಅಥವಾಯಾವುದೇಉಚ್ಛನ್ಯಾಯಾಲಯದ ಇಬ್ಬರು ನ್ಯಾಯಾಧೀಶರನ್ನು ಒಳಗೊಂಡು ನದಿಗೆ ನೀರಿನ ನ್ಯಾಯಾಧೀಕರಣವನ್ನುರಚಿಸಲಾಗುವುದು.  
ಈ ಸಂಭಂದ ಅಂತರರಾಜ್ಯ ಜಲ ವಿವಾದ ಕಾಯ್ದೆಗೆ ತಿದ್ದುಪಡಿ ತರಬೇಕಾಗಿದೆ. ಪ್ರಧಾನಿ ಈ ಕಾನೂನು ತೊಡಕನ್ನು ಬಗೆಹರಿಸಿ ಎರೆಡೂ ರಾಜ್ಯಗಳ ಹಿತ ಕಾಪಾಡಲು ಮುಂದೆ ಬರಬೇಕಾಗಿದೆ. ಸರ್ವೋಚ್ಛ ನ್ಯಾಯಾಲಯದ ಎಷ್ಟೋ ತಿರ್ಪುಗಳನ್ನು ಸಂವಿಧಾನದ ತಿದ್ದುಪಡಿ ಮೂಲಕ ಅಮಾನ್ಯ ಮಾಡಿರುವ ಪ್ರಕರಣಗಳಿರುವಾಗ ಈ ನ್ಯಾಯ ಮಂಡಳಿಯ ಆದೇಶವನ್ನು ಕಾನೂನಿನ ತಿದ್ದುಪಡಿ ಮೂಲಕ ಏಕೆ ಮಾರ್ಪಡು ಮಾಡಬಾರದು? ಇದ್ದಕ್ಕೆ ರಾಜಕೀಯ ಇಚ್ಚಾ ಶಕ್ತಿ ಕೊರತೆ ಹಾಗು ರಾಜಕೀಯ ಅಸ್ಥಿರತೆ ಕಾರಣ ಎಂದರೆ ಅತಿಶಯೋಕ್ತಿಯಾಗಲಾರದು.
ಜಲ ಸಂಪನ್ಮೂಲಗಳ ನಿಪುಣ, ಶ್ರೀಯುತ ಸಿ. ನರಸಿಂಹಪ್ಪ, ಭಾರತದ ರೈತರ ಒಕ್ಕೂಟದ, ಕರ್ನಾಟಕ ಘಟಕದ ಕಾರ್ಯದರ್ಶಿ, ರಾಜ್ಯದ ನಕಾರಾತ್ಮಕಚಿಂತನೆ ಹಾಗು ಸಂಪನ್ಮೂಲ ಅಥವಾ ವಿವಾದಗಳ ಸೂಕ್ತ ನಿರ್ವಹಣೆ ಇಲ್ಲದಿರುವುದನ್ನುದೂಷಿಸಿದ್ದಾರೆ.ಕರ್ನಾಟಕದುಷ್ಟವೂಅಲ್ಲ, ಬಾಧಿತವೂಅಲ್ಲ. ಅಂತರ-ರಾಜ್ಯ ನದೀ ನೀರು ವಿವಾದ ಕಾಯ್ದೆಯ ಅನುಸಾರ ವಾದಿಸಿ, ಪಾಲಿಸಿದರೆ, ವಿವಾದವೇಇರದೆಂದುತಿಳಿಸಿದ್ದಾರೆ.
ನದೀಜೋಡಣೆಅಥವಾಆಧುನೀಕೃತಪರ್ಯಾಯಗಳನ್ನುಅರಸಿ ಶಾಶ್ವತ ಪರಿಹಾರಗಳನ್ನುರೂಪಿಸುವುದು ಸರ್ಕಾರದ ಹೊಣೆಗಾರಿಕೆಯಷ್ಟೇಅಲ್ಲ, ನಿರ್ವಹಿಸುವುದು ಸಾರ್ವಜನಿಕರಜವಾಬ್ದಾರಿಯೂ ಹೌದು. 

LOOKING FOR KAS, PSI, KPSC, BANKING & SSC EXAM
PREPARATION IN BANGALORE ?

LOOKING FOR KAS, PSI, KPSC, BANKING & SSC EXAM PREPARATION IN BANGALORE ?

Contact Us Now