Essay
ಭಯೋತ್ಪಾದನೆ ವಿರುದ್ಧ ಭಾರತ
ಭಯೋತ್ಪಾದನೆಯು ಕಳೆದ ಕೆಲವು ವರ್ಷಗಳಲ್ಲಿ ಶೋಚನೀಯ ಮಟ್ಟದಲ್ಲಿ ಬೆಳೆಯುತ್ತಿದೆ ಮತ್ತು ಮಿತಿ ಮೀರಿದೆ.ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನಾಯಕರು ಇದನ್ನು ಖಂಡಿಸಿದ್ದಾರೆಯಾದರೂ, ಇದರ ತೀವ್ರತೆ ಎಲ್ಲೆಡೆ ಸಾಕ್ಷಿಯಾಗಿರುತ್ತದೆ. ಬಾಂಬ್‍ಗಳನ್ನು ಸ್ಫೋಟಿಸುವುದು, ಬಂದೂಕುಗಳ ಉಪಯೋಗ, ಕೈ ಗ್ರೆನೇಡ್ಗಳ ಉಪಯೋಗ, ರಾಕೆಟ್‍ಗಳ ಉಪಯೋಗ ಇವೆಲ್ಲವೂ ಸಾಗುತ್ತಿವೆ. ಮನೆಗಳ ದರೋಡೆ, ಬ್ಯಾಂಕುಗಳ, ಧಾರ್ಮಿಕ ಸ್ಥಳಗಳ ನಾಶ, ಜನರ ಅಪಹರಣ,  ಬಸ್ಸುಗಳು ಮತ್ತು ವಿಮಾನಗಳ ಅಪಹರಣ, ಅತ್ಯಾಚಾರ ಇವೆಲ್ಲವೂ ಭಯೋತ್ಪದಾನೆಯ ಆಚರಣೆಯ ವಿವಿಧ ರೀತಿಗಳಾಗಿವೆ.
ಪರಿಣಾಮವಾಗಿ, ಪ್ರಪಂಚವು ದಿನದಿಂದ ದಿನಕ್ಕೆ ಸಂಪೂರ್ಣವಾಗಿ ಅಸುರಕ್ಷಿತ, ಅಪಾಯಕಾರಿ ಮತ್ತು ಭಯಭೀತವಾಗಿಸುವ ಸ್ಥಳವಾಗಿದೆ. ಭಯೋತ್ಪಾದನೆ, ರಕ್ತಪಾತ, ಮತ್ತು ಹತ್ಯೆಗಳಂತಹ  ಘೋರವಾದ ಹಿಂಸಾಚಾರದಿಂದ ಕೂಡಿದ ನಿರ್ದಯ ಚಟುವಟಿಕೆಗಳನ್ನು ಕಡೆಗಣಿಸುವುದು ಅಥವಾ ತುಂಬಾ ಲಘುವಾಗಿ ಪರಿಗಣಿಸುವುದು ತುಂಬಾ ಅಪಾಯಕಾರಿಯಾಗಿದೆ.  ಭಾರತ, ಪಾಕಿಸ್ತಾನ, ಮಧ್ಯಪ್ರಾಚ್ಯ, ಅಫ್ಘಾನಿಸ್ತಾನ, ಯುರೋಪಿನ ಭಾಗಗಳು, ಲ್ಯಾಟಿನ್ ಅಮೆರಿಕಾ ಮತ್ತು ಶ್ರೀಲಂಕಾ ಮೊದಲಾದವುಗಳ ಇಂತಹ ದೈತ್ಯಾಕಾರದ ಭಯೋತ್ಪಾದಕರ ಹಿಡಿತದಲ್ಲಿದೆ.
ತಮ್ಮ ಕಿರಿದಾದ, ಪಂಥೀಯ ಮತ್ತು ಅಪವಿತ್ರ ಉದ್ದೇಶಗಳನ್ನು ಸಾಧಿಸಲು ಅವರು ಸಾಮಾಜಿಕ-ವಿರೋಧಿ ಮತ್ತು ಸರ್ಕಾರಿ-ವಿರೋಧಿ ಚಟುವಟಿಕೆಗಳ ಎಲ್ಲಾ ರೀತಿಯಲ್ಲೂ ತೊಡಗುತ್ತಾರೆ. ಕೆಲವೊಮ್ಮೆ, ಭಯೋತ್ಪಾದಕರು ಉತ್ತಮ ಉದ್ದೇಶಗಳನ್ನು ಹೊಂದಿರಬಹುದು, ಆದರೆ ನಂತರ ಅವರು ತಮ್ಮ ಹಲವಾರು ಅಂತರ್ಗತ ದೌರ್ಬಲ್ಯಗಳಿಂದಾಗಿ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅಸಮರ್ಥರಾಗಿದ್ದಾರೆ.
ಭಾರತದಲ್ಲಿ ಭಯೋತ್ಪಾದನೆ ಹೊಸದೇನಲ್ಲ, ಆದರೆ ಕಳೆದ ಕೆಲವು ವರ್ಷಗಳಲ್ಲಿ ಇದು ಬಹಳ ವೇಗವಾಗಿ ಹೆಚ್ಚಾಗಿದೆ.ಭಾರತದಲ್ಲಿ ಭಯೋತ್ಪಾದನೆ ನಮ್ಮ ವಸಾಹತು ಪರಂಪರೆಯ ಅವಿಭಾಜ್ಯ ಅಂಗವಾಗಿ ನೋಡಬೇಕು.ಬ್ರಿಟಿಷ್ 'ವಿಭಜನೆ ಮತ್ತು ಆಳ್ವಿಕೆಯ' ನೀತಿಯನ್ನು ಅನುಸರಿಸಿತು ಮತ್ತು ಅಂತಿಮವಾಗಿ ಉಪಖಂಡವನ್ನು ಎರಡು ರಾಷ್ಟ್ರಗಳಾಗಿ ವಿಭಾಗಿಸಿತು, ನಂತರ ಬಾಂಗ್ಲಾದೇಶದ ಸ್ವಾತಂತ್ರ್ಯದ ನಂತರ ಮೂರು ಭಾಗಗಳಾಯಿತು.ಸ್ವಾತಂತ್ರ್ಯಾ ನಂತರ ಮತ್ತು ವಿಭಜನೆಯ ನಂತರ ಹಿಂಸಾಚಾರ ಮತ್ತು ಭಯೋತ್ಪಾದನೆ ಅಭೂತಪೂರ್ವವಾಗಿತ್ತು.ಧರ್ಮ, ನಂಬಿಕೆ ಮತ್ತು ಸಮುದಾಯದ ಆಧಾರದ ಮೇಲೆ ಈ ವಿಭಜನೆಯು ದ್ವೇಷ, ಹಿಂಸಾಚಾರ, ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಕೋಮು ವಿಭಜನೆಯ ಬೀಜಗಳನ್ನು ಬಿತ್ತಿದೆ ಮತ್ತು ದೀರ್ಘಕಾಲದವರೆಗೆ ವೈಶಮ್ಯ ಬೆಳೆಯುವದಕ್ಕೆ ಕಾರಣವಾಗಿದೆ.
ನಮ್ಮ ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾ, ಮಣಿಪುರ ಮತ್ತು ಅಸ್ಸಾಂಗಳಲ್ಲಿ ಉಗ್ರಗಾಮಿತ್ವವು ತೀವ್ರವಾದ ಭಯೋತ್ಪಾದನೆಯ ಉಲ್ಬಣವು ನಮ್ಮ ವಸಾಹತು ಪರಂಪರೆಯ ಭಾಗವಾಗಿದೆ.ಈ ವಸಾಹತುಶಾಹಿ ನಿಯಮವು ಈ ರಾಜ್ಯಗಳ ಬುಡಕಟ್ಟು ಜನರನ್ನು ರಾಷ್ಟ್ರದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಿಲ್ಲ. ಬದಲಿಗೆ, ಅವರಲ್ಲಿ ದ್ವೇಷ, ಅನ್ಯಲೋಕನೆ ಮತ್ತು ಅಸಂಗತತೆಯನ್ನು ಸೃಷ್ಟಿಸಲಾಯಿತು. ಪರಿಣಾಮವಾಗಿ, ಅವರು ಸ್ವಾತಂತ್ರ್ಯದ ನಂತರ ನಿರ್ಲಕ್ಷ್ಯಗೊಂಡರು ಮತ್ತು ದೇಶದ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ತಮ್ಮ ಜನಾಂಗೀಯ ಗುರುತನ್ನು ಮತ್ತು ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಸುಳ್ಳು ಭಾವನೆ  ಮೂಡಿದ್ದರಿಂದ ಅವರು ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಪಾಲಿಸಲು ನಿರ್ಧರಿಸಿದರು. ಭಾರತವು ಏಕೈಕ, ಶಕ್ತಿಯುತ ಮತ್ತು ಯಶಸ್ವಿ ಪ್ರಜಾಪ್ರಭುತ್ವವಾಗಿ ಕಾಣಲು ಇಷ್ಟಪಡದ ನೆರೆಹೊರೆಯ ರಾಷ್ಟ್ರಗಳಿಂದ ಅವರ ನಿರರ್ಥಕ ಸಶಸ್ತ್ರ ಹೋರಾಟದಲ್ಲಿ ಅವರು ಸಹಾಯ ಮಾಡಿದರು.ನಮ್ಮ ಈಶಾನ್ಯ ರಾಜ್ಯಗಳಲ್ಲಿ ಭಯೋತ್ಪಾದನೆಯ ಈ ಹೊರಹೊಮ್ಮುವಿಕೆಯು, ರಾಜಕೀಯ ಮುಖಂಡರ ಮತ್ತು ಸರಕಾರದ ಇಚ್ಛೆಯ ಕೊರತೆ ಮತ್ತು ಈ ಪ್ರಮುಖ ಗುಂಪುಗಳನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ತರಲು ಸರಿಯಾದ ಪ್ರಯತ್ನಗಳನ್ನು ಮಾಡದಿರುವುದೇ ಕಾರಣವೆನಿಸುತ್ತಿದೆ.
ಸಾಮಾಜಿಕ-ರಾಜಕೀಯ ಮತ್ತು ಆರ್ಥಿಕ ಅಂಶಗಳನ್ನು ಹೊರತುಪಡಿಸಿ, ಮಾನಸಿಕ, ಭಾವನಾತ್ಮಕ ಮತ್ತು ಧಾರ್ಮಿಕ ಅಂಶಗಳು ಕೂಡಾ ಸಮಸ್ಯೆಗೆ ಕಾರಣವಾಗಿವೆ. ಇವೆಲ್ಲವೂ ಬಲವಾದ ಭಾವನೆಗಳನ್ನು ಮತ್ತು ಉಗ್ರಗಾಮಿತ್ವವನ್ನು ಸೃಷ್ಟಿಸುತ್ತವೆ. ಪಂಜಾಬ್ ನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಭಯೋತ್ಪಾದನೆಯ ಅಭೂತಪೂರ್ವ ಭೂತವನ್ನು ಈ ಹಿನ್ನೆಲೆಯಲಿ ಅರ್ಥೈಸಿಕೊಳ್ಳಬಹುದು.ಒಂದು ಸಮಯದಲ್ಲಿ ಪ್ರತ್ಯೇಕ ಖಲಿಸ್ತಾನ್ ಬೇಡಿಕೆ ಬಲಗೊಂಡಿತು ಮತ್ತು ಶಕ್ತಿಯುತವಾಯಿತು ಅದು ನಮ್ಮ ಒಗ್ಗಟ್ಟನ್ನು ಮತ್ತು ಸಮಗ್ರತೆಯ ಮೇಲೆ ಪರಿಣಾಮ ಬೀರಿತು. ಆದರೆ ಅಂತಿಮವಾಗಿ  ಸರ್ಕಾರದ ಮತ್ತು ಜನರ ಮೇಲೆ ಉತ್ತಮ ಅರ್ಥದಲ್ಲಿ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಯಿತು, ಇದರಲ್ಲಿ ಜನರು ಸಂಪೂರ್ಣ ಪಾಲ್ಗೊಂಡರು. ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿನ ಜನರ ಪಾಲ್ಗೊಳ್ಳುವಿಕೆ ಮತ್ತು ಸೂಕ್ತ ಭದ್ರತಾ ಪಡೆಗಳನ್ನು ಅಳವಡಿಸಿಕೊಂಡಿದ್ದರಿಂದ ಪಂಜಾನ್ ನಲ್ಲಿ ಭಯೋತ್ಪಾದನೆ ವಿರುದ್ಧ ಯಶಸ್ವಿಯಾಗಲು ಸಹಾಯವಾಯಿತು.
ಪಂಜಾಬ್‍ನಲ್ಲಿ ಸಾಮಾಜಿಕ-ರಾಜಕೀಯ ಗುರಿಗಳನ್ನು ಸಾಧಿಸುವ ಸಾಧನವಾಗಿ ಭಯೋತ್ಪಾದನೆಯನ್ನು ಪ್ರೇರೆಪಿಸಿ ಶಸ್ತ್ರಾಸ್ತ್ರ ಮತ್ತು ಯುದ್ಧಸಾಮಗ್ರಿ, ತರಬೇತಿ ಮತ್ತು ಹಣಕಾಸು ಪೂರೈಕೆಯ ಮೂಲಕ ಹೆಚ್ಚಿನ ಬೆಂಬಲವನ್ನು ಪಡೆಯಿತು.ಕೆಲವು ರಾಷ್ಟ್ರಗಳಲ್ಲಿ ಅಧಿಕಾರದಲ್ಲಿರುವ ಜನರು ಯಾವಾಗಲೂ ತಮ್ಮದೇ ಆದ ರಾಜಕೀಯ ನಿಬರ್ಂಧಗಳಿಂದಾಗಿ ಭಾರತಕ್ಕೆ ಪ್ರತಿಕೂಲವಾಗಿರುತ್ತಾರೆ.ಅವರು ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳ ಬಳಕೆಯ ತರಬೇತಿ ನೀಡಿ ನಂತರ ಅವರನ್ನು ದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದಾರೆ.ಜನರಲ್ಲಿ ಬಡತನ, ನಿರುದ್ಯೋಗ ಮತ್ತು ಶಿಕ್ಷಣದ ಕೊರತೆ ಮೊದಲಾದವು ಪರಿಸ್ಥಿತಿಯನ್ನು ಮತ್ತಷ್ಟು ಕೆಡಿಸುತ್ತಿವೆ. ವಿವಿಧ ರಾಜಕೀಯ, ಸಾಮುದಾಯಿಕ ಮತ್ತು ಆರ್ಥಿಕ ಒತ್ತಡಗಳ ಅಡಿಯಲ್ಲಿ, ಅವರು ಪ್ರಚೋದÀನೆಗೆ ತುತ್ತಾಗುತ್ತಾರೆ ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನು ತಿರಸ್ಕರಿಸುತ್ತಾರೆ.
ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದನೆ ಈ ಪ್ರಕೃತಿಯಿಂದ ಬಂದಿದೆ.ವ್ಯಾಪಕ ಬಡತನ, ನಿರುದ್ಯೋಗ, ಯುವಜನರ ನಿರ್ಲಕ್ಷ್ಯ, ರೈತರು ಮತ್ತು ಕಾರ್ಮಿಕ ವರ್ಗದವರು ಮತ್ತು ಭಾವನಾತ್ಮಕ ಅನ್ಯಲೋಕನೆ, ಪ್ರಾಂತ್ಯದಲ್ಲಿನ ಉಗ್ರವಾದಕ್ಕೆ ಕೆಲವು ಪ್ರಮುಖ ಕಾರಣಗಳಾಗಿವೆ. ನಮ್ಮ ಗಡಿಯುದ್ದಕ್ಕೂ ಇರುವ ಪ್ರತಿಕೂಲವಾದ ಪಡೆಗಳು ಸಹ ಸಾಕಷ್ಟು ಸಹಾಯ ಮಾಡುತ್ತಿವೆ.
ಮುಂಬೈ ಮತ್ತು ಭಾರತದ ಇತರ ನಗರಗಳಲ್ಲಿನ ಬಾಂಬ್ ಸ್ಫೋಟಗಳು ಯೋಜಿಸಿದ್ದು, ಅಪಾರ ಆರ್ಥಿಕ ಹಾಗು ಜೀವ ನಷ್ಟಕ್ಕೆ ಎಡೆಮಾಡಿದೆ.ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಕಳೆದ ಐದು ವರ್ಷಗಳಲ್ಲಿ ಮುಗ್ಧ ನಾಗರಿಕರು, ರಕ್ಷಣಾ ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಸಾವಿರಾರು ಜನರ ಸಾವಿಗೆ ಕಾರಣವಾಗಿದೆ.ಇದು ರಾಜ್ಯದಲ್ಲಿ ಹಲವಾರು ಕೋಟಿಗಳ ಮೌಲ್ಯದ ಆಸ್ತಿಯ ನಷ್ಟವನ್ನು ಉಂಟುಮಾಡಿದೆ.ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಯೋತ್ಪಾದನೆ ಮತ್ತು ಉಗ್ರಗಾಮಿತ್ವವನ್ನು ಗಂಭೀರವಾಗಿ ಟೀಕಿಸುವ ಹೊರತಾಗಿ, ಗುರುತಿಸುವಂತಹ ಕಾರ್ಯಚಟುವಟಿಕೆ ನಡೆದಿಲ್ಲ.
 ಉಗ್ರಗಾಮಿಗಳು ಮತ್ತು ಭಯೋತ್ಪಾದಕರ ಮೇಲೆ ವಿಶ್ವದ ಎಲ್ಲಾ ಸರ್ಕಾರಗಳು ಏಕಕಾಲದಲ್ಲಿ ಮತ್ತು ನಿರಂತರವಾಗಿ ಬೇಧಿಸಬೇಕಾಗುತ್ತದೆ. ವಿವಿಧ ದೇಶಗಳ ನಡುವಿನ ಸಹಕಾರದಿಂದ ಮಾತ್ರ ಜಾಗತಿಕ ಬೆದರಿಕೆಯನ್ನು ಕಡಿತಗೊಳಿಸಬಹುದು ಮತ್ತು ತೆಗೆದುಹಾಕಬಹುದು. ಯಾವುದೇ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಯು ಬಾಹ್ಯ ಬೆಂಬಲ ದೊರೆಯದಿದ್ದಲ್ಲಿ  ದೀರ್ಘಕಾಲದವರೆಗೂ ಬೆಳೆಯಲು ಕಷ್ಟಕರ.
ಅಂತಿಮ ವಿಶ್ಲೇಷಣೆಯಲ್ಲಿ, ಎಲ್ಲಾ ಭಯೋತ್ಪಾದಕ ಗುಂಪುಗಳು ಕ್ರಿಮಿನಲ್. ಅವರು ಒಳ್ಳೆಯ ಮತ್ತು ಕೆಟ್ಟದರ ನಡುವಿನ ವ್ಯತ್ಯಾಸವನ್ನು ಗುರುತಿಸುವುದಿಲ್ಲ; ಅವರು ಯಾರೊಬ್ಬರನ್ನೂ ಹೊರತುಪಡಿಸುವುದಿಲ್ಲ, ಮಹಿಳೆಯರಾಗಲಿ ಅಥವಾ ಮಕ್ಕಳಾಗಲಿ.ಜಿಹಾದ್ ಮೂಲಕ, ವಿಶ್ವದಾದ್ಯಂತ ಇಸ್ಲಾಂ ಧರ್ಮವನ್ನು ಸ್ಥಾಪಿಸುವುದು ಅವರ ಗುರಿಯಾಗಿದೆ. ಬಾಂಬುಗಳು, ಸ್ಫೋಟಕಗಳು, ಗ್ರೆನೇಡ್‍ಗಳನ್ನು ತಯಾರಿಸಲು ಮತ್ತು  ಹಗುರ ಹಾಗು ಭಾರವಾದ ಶಸ್ತ್ರಾಸ್ತ್ರಗಳನ್ನು ಬಳಸಿಕೊಳ್ಳುವಲ್ಲಿ ಅವರು ತರಬೇತಿ ನೀಡುತ್ತಾರೆ. ಅವರು ಕಾಶ್ಮೀರದ ಕಣಿವೆಯಲ್ಲಿ ದೊಡ್ಡ ಸಂಖ್ಯೆಯ ಅಡಗುತಾಣಗಳನ್ನು ಹೊಂದಿದ್ದಾರೆ.ತಮ್ಮ ಭಯೋತ್ಪಾದಕ ಕೃತ್ಯಗಳಿಗಾಗಿ ಭಾರತ ಸೇರಿದಂತೆ ಇಡೀ ಪ್ರಪಂಚವನ್ನು ಅವರು ತಾಣವಾಗಿಸಿಕೊಂಡಿದ್ದಾರೆ.                                      

LOOKING FOR KAS, PSI, KPSC, BANKING & SSC EXAM
PREPARATION IN BANGALORE ?

LOOKING FOR KAS, PSI, KPSC, BANKING & SSC EXAM PREPARATION IN BANGALORE ?

Contact Us Now