Essay
ಜಾಗತಿಕ ಗ್ರಾಮ–ಕಲ್ಪನೆ ಅಥವಾ ವಾಸ್ತವತೆ
ಇತ್ತೀಚೆಗೆ ಅನೇಕ ಮೂಲಗಳಿಂದ ಕೇಳಿ ಬರುವ ಮಾತು "ನಾವು ಎಲ್ಲಿಯಾದರೂ ಹೋಗಬಹುದು", "ನಾವು ಹೋಗಬೇಕಿಲ್ಲ, ನಮ್ಮ ಮನೆ ಬಾಗಿಲಿಗೇ ವಸ್ತುಗಳು ಬರಲು ಇಚ್ಛಿಸುತ್ತೇವೆ",  ಅಂತರ್ಜಾಲದ ಮೂಲಕ ಕ್ಷಣಗಳಲ್ಲಿ ನಾವು ಬಯಸುವ ಯಾವುದನ್ನಾದರೂ ನೋಡಬಹುದು ಅಥವಾ ನಾವು ಬಯಸಿದ್ದನ್ನು ಪಡೆಯಬಹುದು. ಇದು ವಿದ್ಯುನ್ಮಾನ ಮಾಧ್ಯಮದಿಂದ ಸಾಧ್ಯವಾಗಿದೆ. ಭೌತಿಕ ಪ್ರಪಂಚದ ಈ ಸಂಕುಚನವು "ಜಾಗತಿಕಗ್ರಾಮ" ಎಂಬ ಪದದ ರಚನೆಗೆ ಕಾರಣವಾಗಿದೆ. ಕೆನಡಾದ ಮಾರ್ಷಲ್ಮೆಕ್ಲುಹಾನ್  1960ರ ದಶಕದಲ್ಲಿ  "ಜಾಗತಿಕಗ್ರಾಮ" ಎಂಬ ಪದವನ್ನು ಸೃಷ್ಟಿಸಿದರು.  ಟೆಲಿವಿಷನ್ ಆಗ ಹೊಸದಾಗಿ ಬಳಸಲ್ಪಟ್ಟ ಎಲೆಕ್ಟ್ರಾನಿ ತ್ರವಾಗಿದ್ದು, ಜಗತ್ತನ್ನು ಅವರು ಮುಂಬರುವ ದಿನಗಳಲ್ಲಿ ದೂರದರ್ಶನದ ಕಣ್ಣಿನಲ್ಲಿ ನೋಡಿದರು. "ಜಾಗತಿಕಗ್ರಾಮ" ಎಂಬ ಪದವು ವಿಶ್ವವು ಸಂಕುಚಿತಗೊಳ್ಳುತ್ತದೆ ಎಂಬುದನ್ನು ಸೂಚಿಸುವ ಒಂದು ಪದವಾಗಿದೆ.ಅರ್ಥಶಾಸ್ತ್ರ ಮತ್ತು ಇತರ ಸಾಮಾಜಿಕ ವಿಜ್ಞಾನಗಳನ್ನು ಇದು ಸಂಬಂಧಿಸುತ್ತದೆ. ತಂತ್ರಜ್ಞಾನದ ಮೂಲಕ ಜಾಗತಿಕಹಳ್ಳಿಗಳು ಹೇಗೆ ಹತ್ತಿರವಾಗುತ್ತಿವೆ ಎಂದು ವಿವರಿಸಿದೆ. ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಅಥವಾ ಪ್ರತಿಮೂಲೆಗೆ ಒಂದೇ ಸಮಯದಲ್ಲಿ                                                                                                                                                                                                                                                                                                                                                                                                                                                                                                                                                      ಮಾಹಿತಿಯನ್ನು ತತ್ ಕ್ಷಣ ತಿಳಿಸುವುದು ಸಾಧ್ಯವಾಗಿದೆ.  ತಮ್ಮ ಪುಸ್ತಕಗಳಲ್ಲಿ,  ಅವರ ಬರಹಗಳ ಮೂಲಕ, ಮ್ಯಾಕ್ಲ್ಯೂಹನ್ ಅವರು “ಜಾಗತಿಕಗ್ರಾಮ” ಎಂಬ ಈ ಪದವನ್ನು ಜನಪ್ರಿಯಗೊಳಿಸಿದರು.
ಇಂದು ಜಾಗತೀಕರಣವನ್ನು ಬಹುವಿಸ್ತಾರವಾಗಿ ಮತ್ತು ವಿಪುಲವಾಗಿ ಬಳಸಲಾಗುತ್ತಿದೆ, ಇದು ಮಾರುಕಟ್ಟೆಗಳ ಅಂತರರಾಷ್ಡ್ರೀಕರಣವನ್ನು ಸೂಚಿಸುತ್ತದೆ ಮತ್ತು ಎಲ್ಲ ರೀತಿಯ ಸಂವಹನ ಹರಡುವಿಕೆಯನ್ನು ಸೂಚಿಸುತ್ತದೆ, ಕೇವಲ ವಿದ್ಯುನ್ಮಾನ ಮಾಧ್ಯಮದ ಅರ್ಥವಲ್ಲ, ಆದರೆ ವಿನಿಮಯದ ಅರ್ಥದಲ್ಲಿ ಕೂಡ ಅಂದರೆ ಜನರು ಒಂದು ಮೂಲೆಯಿಂದ ಇನ್ನೊಂದಕ್ಕೆ ಚಲಿಸುವವರೂ ಸಹ ಮತ್ತು ಸರಕುಗಳು ಹಾಗೂ ಸಂದೇಶಗಳೂ ಸಹ.  ಅರ್ಥಮಾಡಿಕೊಳ್ಳಲು ಅತ್ಯಂತ ಸಂಕೀರ್ಣವಾದ ಅಂಶವೆಂದರೆ ಮಾನವಕುಲದ ದೊಡ್ಡಕ್ರಾಂತಿ, "ಸಂವಹನ" ಎನ್ನುವುದು. ಜಾಗತೀಕರಣವು ಈಗ ವಾಸ್ತವವಾಗಿದೆ, ಏಕೆಂದರೆ ಎಲ್ಲಾ ಸಮಾಜಗಳು ಸಾರ್ವತ್ರಿಕ ಕ್ರಮದಲ್ಲಿ ಮಾಹಿತಿ ಮತ್ತು ಸಂವಹನ ಕಾರ್ಯಾಚರಣೆಯ ಮೂಲಕ ಸಂಯೋಜಿಸಲ್ಪಟ್ಟಿವೆ – ಹೀಗೆನ್ನುವುದು ಹಲವರ ವಾದ. ವಾಸ್ತವದಲ್ಲಿ ಇದು ಒಂದು ಸುಳ್ಳು ಮುಸುಕಾಗಿದೆ ಅಷ್ಟೇ. ಏಕೆಂದರೆ ಇದು ಬಹಿರಂಗಪಡಿಸುವುದಕ್ಕಿಂತ ನೂತನ ಜಗತ್ತಿನ ಸ್ವರೂಪವನ್ನು ಮರೆಮಾಚುತ್ತಿದೆ. ಜಗತ್ತಿನಾದ್ಯಂತ ಚಿಂತಕರು ಮತ್ತು ಪ್ರವರ್ತಕರು, ಕಲಿತ ವರ್ಗದವರು ಜಾಗತೀಕರಣವನ್ನು ಎಚ್ಚರಿಸುತ್ತಿದ್ದಾರೆ. ಕೆಲವು ಜನರು ಧೈರ್ಯದಿಂದ, ಕೆಲವರು ಪ್ರಾಬಲ್ಯ, ಸಾಂಸ್ಕøತಿಕ ಆಘಾತಗಳು, ಅಗ್ಗದ ಮನೋರಂಜನೆ ಮತ್ತು ಮುಂತಾದವುಗಳನ್ನುಅವರು ಮನಗಾಣುತ್ತಿದ್ದಾರೆ.
ಪ್ರಪಂಚದಾದ್ಯಂತ ಭಯೋತ್ಪಾದನೆ ವಿರೋಧಿಸಲ್ಪಡುತ್ತಿದೆ ಎಂದು ಹೇಳುವ ಸಂದರ್ಭಗಳಲ್ಲಿ ಜಾಗತೀಕರಣವು ವಾಸ್ತವಕ್ಕಿಂತ ದೂರವಿದೆ ಎಂದು ಹೇಳುವ ಒಂದು ವಾದವಿದೆ. ವಿದೇಶಿ ಸರಕುಗಳ ಬಳಕೆಯನ್ನು ಅನೇಕಬಾರಿ ವಿರೋದಿಸಿ ಸ್ಥಳೀಯ ವಸ್ತುಗಳಿಗೆ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ, ಗಣನೀಯ ಪ್ರಮಾಣದಲ್ಲಿ ಇಂದಿನ ಪ್ರಪಂಚವು ಅದರ ಮೂಲಗಳನ್ನು, ಅದರ ಸೃಷ್ಟಿ ಮತ್ತು ಅದರ ಹಂಚಿಕೆಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ ಎಂದುಅರ್ಥ.
ಓದುವ ಅಭ್ಯಾಸವು ಒಂದು ಅನನ್ಯ ಅನುಭವವನ್ನು ನೀಡುತ್ತದೆ. ಸಾರ್ವಜನಿಕ ಜಾಗಗಳ ಬಗ್ಗೆ ಯೋಚಿಸುವಾಗ ಇದು ಗೌಪ್ಯತೆ ಪ್ರಜ್ಞೆಯನ್ನು ಬೆಳೆಸುತ್ತದೆ, ಆದರೆ, ಇಂದಿನ ಸಾಮಾಜಿಕ ಮಾಧ್ಯಮಗಳು ಮತ್ತು ದೂರದರ್ಶನವು ಅದಕ್ಕೆ ವಿರುದ್ಧವಾಗಿದೆ.  ಖಾಸಗಿ ಚಿಂತನೆಗಳಲ್ಲಿ ಸಾರ್ವಜನಿಕ ಆಯಾಮಗಳನ್ನು ತೆರೆಯುವುದು. ಓದುವುದು ಎಲ್ಲಾ ಓದುಗರಲ್ಲಿ ಒಬ್ಬ ವ್ಯಕ್ತಿಯ ಪರಿಕಲ್ಪನೆಯನ್ನು ಹರಡುತ್ತದೆ, ಸಾಮಾಜಿಕ ಮಾಧ್ಯಮ ಅಥವಾ ದೂರದರ್ಶನವು ಸೃಷ್ಟಿಕರ್ತ, ಪ್ರಾಯೋಜಕರು, ಇದನ್ನು ಬಳಸುವ ಲಕ್ಷಾಂತರ ಜನರ ಬಹುವಿಚಾರಗಳನ್ನು ಹರಡುತ್ತಿದೆ. ಒಂದು ಹಂತದಲ್ಲಿ ದೂರದರ್ಶನ ಆಲೋಚನೆಗಳನ್ನು ತೆರೆಮರೆಯಲ್ಲಿದ್ದುಕೊಂಡೇ ನಿಯಂತ್ರಿಸುವ ಶಕ್ತಿಯಾಗಿ ಪಾತ್ರನಿರ್ವಹಿಸಿದೆ ಎಂದು ತೋರುತ್ತಿತ್ತು, ಆದರೆ ಈಗ ಸಾಮಾಜಿಕ ಮಾಧ್ಯಮ, ಅಂತರ್ಜಾಲ, ಚರವಾಣಿ ಮತ್ತು ಗಣಕಯಂತ್ರಗಳು ಪ್ರತಿಯೊಬ್ಬರ ವಿಚಾರಗಳನ್ನೂ ನಿಯಂತ್ರಿಸುವಂತೆ ತೋರುತ್ತಿದೆ. ಆದ್ದರಿಂದ, ಈ ಪಾರಸ್ಪರಿಕ ಮತ್ತು ಅಂತರ್ಜಾಚದ ಬಳಕೆ ಜಾಗತಿಕ ಮಟ್ಟಕ್ಕಿಂತ ಜಾಗತಿಕ-ಮನಸ್ಸು ಎಂಬುದಕ್ಕೆ ಹೆಚ್ಚುಅನ್ವಯಿಸುತ್ತದೆ. ಗ್ರಾಮೀಣ ಪರಿಕಲ್ಪನೆಯು ಕೇವಲ ದೂರದರ್ಶನ ಅಥವಾ ಸಾಮಾಜಿಕ ತಾಣದಂತಲ್ಲದೆ, ಸಂವಹನದಲ್ಲಿನ ಪ್ರಗತಿಗಳಲ್ಲಿ, ಯಾವುದೇ ಅಂಶವು ಮಿಶ್ರಪ್ರತಿಕ್ರಿಯೆ ಹೊಂದಿದೆ. ನಿಸ್ಸಂದೇಹವಾಗಿ, ಅದು ಹರಡುವ ಬುದ್ಧಿಯ ದ್ವಾರಗಳು ಮತ್ತು ಸ್ವೀಕರಿಸುವ ಬುದ್ಧಿಯ ದ್ವಾರಗಳನ್ನು ತೆರೆದಿರುತ್ತದೆ, ಅಂತಹ ಸ್ವಾತಂತ್ರ್ಯ, ಹೆಚ್ಚಿನ ವೇಗದ ಪ್ರಗತಿ ಅಥವಾಇತರ ಪ್ರಪಂಚದ ಅನುಭವವನ್ನು ಇನ್ನೂ ಅನೇಕ ಸ್ತರಗಳಲ್ಲಿ ಸಾಧ್ಯವಾಗಿಸಿದೆ.  ಪರಸ್ಪರ ಮಾರ್ಗಗಳು ಪರಸ್ಪರ ಆರ್ಥಿಕತೆಗೆ ದಾರಿಮಾಡಿಕೊಟ್ಟಿದೆ.  ವೃತ್ತಿಪರತೆ ಎಲ್ಲರಲ್ಲಿಯೂ ಹೆಚ್ಚಾಗಿದೆ ಮತ್ತು ಎಲ್ಲರೂ ಸಾರ್ವಜನಿಕರನ್ನು ತಲುಪಲು ಸಂವಹನಾ ಸಂಬಂಧಗಳನ್ನು ಗಟ್ಟಿಮಾಡಿಕೊಳ್ಳುತ್ತಿದ್ದಾರೆ.ಸಾಂಸ್ಕøತಿಕ ಪ್ರಸರಣ ನಿಯಮಿತ ವಿದ್ಯಮಾನವಾಗಿ ಮಾರ್ಪಟ್ಟಿದೆ, ಇದು ಸಂಸ್ಕೃತಿಯನ್ನು ಇನ್ನಷ್ಟು ಮುಚ್ಚಿಟ್ಟಿದೆ ಆಗಲಿ ಬಹಿರಂಗಗೊಳಿಸಿಲ್ಲ.  ಮೇಲಿನ ಎಲ್ಲಾ ವಿಶ್ಲೇಷಣೆಗಳ ಅನುಸಾರ  “ಜಾಗತಿಕಗ್ರಾಮ” ಕಲ್ಪನೆಯೇ ಹೊರತು ವಾಸ್ತವತೆಯಲ್ಲ. 

LOOKING FOR KAS, PSI, KPSC, BANKING & SSC EXAM
PREPARATION IN BANGALORE ?

LOOKING FOR KAS, PSI, KPSC, BANKING & SSC EXAM PREPARATION IN BANGALORE ?

Contact Us Now