Essay
ಭಾರತದಲ್ಲಿ ನಗದು ರಹಿತ ಆರ್ಥಿಕತೆ
ಜಗತ್ತಿನಲ್ಲಿ ಆರ್ಥಿಕ ವ್ಯವಹಾರಗಳು ಮಾನವನ ಉಗಮದಷ್ಟೇ ಪ್ರಾಚೀನ. ಭಾರತ ನಾಗರೀಕತೆಯ ತೊಟ್ಟಿಲು. ಹಾಗಾಗಿ ಬಹುತೇಕ ಚಟುವಟಿಕೆಗಳು ಇಲ್ಲಿಯೇ ಉಗಮಿಸಿವೆ. ಆರ್ಥಿಕತೆಗೆಸಂಬಂಧಿಸಿದಂತೆ, ಜಗತ್ತಿನ ಗುರು ಕೌಟಿಲ್ಯ ಆರ್ಥಿಕತೆಯ ನಾಂದಿ ಹಾಡಿದ್ದು “ಅರ್ಥಶಾಸ್ತ್ರ” ಎಂಬ ಅವರ ಬರಹದಲ್ಲಿ. ನಗದು ರಹಿತ ವ್ಯವಹಾರ ಜಗತ್ತಿಗೆ ಹೊಸತಲ್ಲ, ಅಂತೆಯೇ ಭಾರತಕ್ಕೂ ಸಹ.    
ಆದರೀಗ ಆಧುನಿಕ ಜಗತ್ತಿನ ವಿಶ್ವಮಟ್ಟದಲ್ಲಿ ಭಾರತವು ಆರ್ಥಿಕ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಮುಂದುವರೆಯುತ್ತಿರುವ ರಾಷ್ಟ್ರವಾಗಿದೆ. ಹೀಗಿರುವಾಗ ಭಾರತವು “ನಗದು ರಹಿತ” ಎಂಬ ಆಧುನಿಕ ಆರ್ಥಿಕತೆಯನ್ನು ಅಳವಡಿಸಿಕೊಳ್ಳುವತ್ತ ಸಾಗಿದೆ. ನಮ್ಮ ದೇಶದ ಅರ್ಥಿಕತೆಯು ಹೆಚ್ಚು ಮುಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಹಾಗೂ ಲೇವಾದೇವಿ ವ್ಯವಹಾರಗಳಿಂದ ಪ್ರಾಥಮಿಕವಾಗಿ ಕಟ್ಟಲ್ಪಟ್ಟಂತಹ  ಆರ್ಥಿಕತೆಯಾಗಿದೆ. ನಗದು ರಹಿತ ಅರ್ಥಿಕತೆಯು ಪ್ರಸ್ತುತ ದಿನಗಳಲ್ಲಿ ಒಂದು  ಸವಾಲಾಗಿದ್ದರೂ ಸಹ ಇದೊಂದು ಅಭಿವೃದ್ಧಿಯ ಅಗತ್ಯತೆಯಾಗಿದೆ. 
ಇದರ ಅರ್ಥವು ನಗದು ರಹಿತ ದಾಖಲೆಗಳ ವ್ಯವಹಾರವಾಗಿದೆ. ಇತರ ಅಭಿವೃದ್ಧಿ ಶೀಲ ರಾಷ್ಟ್ರಗಳನ್ನು ಹೋಲಿಕೆ ಮಾಡಿದರೆ ಭಾರತದಲ್ಲಿ 70 % ನಗದು ವ್ಯವಹಾರವಿದ್ದು  ಇದನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು “ಕ್ಯಾಶ್ಲೆನಸ್ ಇಂಡಿಯಾ” (ನಗದು ರಹಿತ ಆರ್ಥಿಕತೆಯನ್ನು) ಪ್ರಾರಂಭಿಸಿತು. ಈ ಮೇಲ್ಕಂಡ ಉದ್ದೇಶದಿಂದ ಭಾರತದಲ್ಲಿ ಕೇಂದ್ರ ಸರ್ಕಾರವು ನವೆಂಬರ್ 8, 2016ರಂದು 500, 1000ರೂ. ನಗದನ್ನು ಅಮಾನೀಕರಣಗೊಳಿಸಿತ್ತು. 
ಹೌದು ನಗದು ರಹಿತ ಆರ್ಥಿಕತೆಯ ಪ್ರಮುಖ ಉದ್ದೇಶವೇ ಕಪ್ಪು ಹಣವನ್ನು ದೇಶದಲ್ಲಿ ತಡೆಗಟ್ಟುವುದಾಗಿದೆ. ಕೇಂದ್ರ ಸರ್ಕಾರವು ದೇಶದ ಆರ್ಥಿಕ ಅಭಿವೃದ್ಧಿ ಹಾಗೂ ಹಣದ ನಿಯಂತ್ರಣವು ಮಾರುಕಟ್ಟೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬೇಕಾದರೆ ಅನಗತ್ಯ ಕಪ್ಪು ಹಣದ ರೂಪವು ಸಮಾಜದಲ್ಲಿ ಕಡಿಮೆಗೊಳ್ಳಬೇಕು ಹಾಗೂ ದೇಶದ ಎಲ್ಲಾ ಹಣದ ದಾಖಲೆ ದೊರೆಯಬೇಕು ಎಂಬುದು ಪ್ರಮುಖ ಉದ್ದೇಶವಾಗಿದೆ. 
ಜರ್ಮನಿ, ಜಪಾನ್, ಅಮೇರಿಕಾ, ಫ್ರಾನ್ಸ್ ಮತ್ತು ಇತರ ಜಾಗತಿಕ ದೇಶಗಳಲ್ಲಿ ಕೇವಲ 20-25 % ಮಾತ್ರ ನಗದು ರೂಪ ಕಾಣಸಿಗುತ್ತದೆ. ನಂತರದ ಎಲ್ಲಾ ವ್ಯವಸ್ಥೆಯು ಇ-ಆಡಳಿತದ ಮುಖಾಂತರ ನಡೆಯುತ್ತದೆ. ನೋಟುಗಳನ್ನು ಮುದ್ರಿಸಲು ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಹಣವನ್ನು ಕೇಂದ್ರ ಸರ್ಕಾರವು ಖರ್ಚು ಮಾಡುತ್ತದೆ. ಇನ್ನು ತಪ್ಪಿಸಲು ಹಾಗೂ ನಗದಿನ ಪ್ರಮಾಣ ಕಡಿತಗೊಳಿಸಲು ನಗದು ರಹಿತ ಅರ್ಥಿಕತೆಯನ್ನು ಪ್ರಾರಂಭಿಸಲಾಗಿದೆ.. 
ದೇಶದಲ್ಲಿ ಭಯೋತ್ಪಾದನೆ ಹಾಗೂ ಇತರ ಸಮಾಜ ವಿರೋಧಿ ಚಟುವಟಿಕೆಗಳನ್ನು ತಡೆಗಟ್ಟಲ್ಲು ನಕಲಿ ನೋಟಿನ ಚಲಾವಣೆಯನ್ನು ಸಂಪೂರ್ಣವಾಗಿ ಭಾರತದಲ್ಲಿ ನಿಲ್ಲಿಸಬೇಕಾಗಿದೆ. ಅದಕ್ಕೆ ಇರುವಂತಹ ಪ್ರಮುಖ ದಾರಿ ನಗದು ರಹಿತ ಅರ್ಥಿಕತೆ. 
ದೇಶದ ಆಡಳಿತದಲ್ಲಿ ಭಾಗಶಹ ಇ-ಆಡಳಿತವನ್ನು ಪರಿಚಯಿಸಿ ಯಶಸ್ಸನ್ನು ಕಂಡುಕೊಳ್ಳಲಾಗಿದೆ. ಹೀಗಿರುವಾಗ ಸಾರ್ವಜನಿಕ ಆಡಳಿತಕ್ಕೆ  ಅಗತ್ಯವಾದ ಇ-ಆಡಳಿತವನ್ನು ಒದಗಿಸಬೇಕಾಗಿದೆ. ಕೇಂದ್ರ ಸರ್ಕಾರವು ಈ ಕೆಳಕಂಡ ಮುಖ್ಯ ಉದ್ದೇಶವನ್ನು ಹೊಂದಿದ್ದು ಇದರ ಅಗತ್ಯತೆಯನ್ನು ತಿಳಿದುಕೊಳ್ಳಲು ಜಿಲ್ಲಾ ಮತ್ತು ಗ್ರಾಮ ಮಟ್ಟದಲ್ಲಿ ಕಾರ್ಯ ಕೈಗೊಂಡಿದೆ. 
ನಗದು ರಹಿತ ಆರ್ಥಿಕತೆಯು ಮುಖ್ಯವಾಗಿ ಬರಬೇಕಾದರೆ ದಾಖಲೆಗಳು ಲಭ್ಯವಾಗಬೇಕು. ಹಾಗಾಗಿ ಇ-ವ್ಯವಹಾರ ಅಗತ್ಯವಿರುವ ಎಲ್ಲಾ   ದಾಖಲೆಗಳನ್ನು ದೊರಕಿಸುತ್ತದೆ. ಇದರಿಂದ ಭಾರತೀಯ ತೆರಿಗೆ ಪ್ರಮಾಣದಲ್ಲಿ ಹೆಚ್ಚಳ ಸಾಧ್ಯವಾಗುವುದರಿಂದ ಇದೊಂದು ಪ್ರಮುಖ ಪ್ರಯೋಜನವಾಗಿದೆ. 
ದಾಖಲೆ ಸಹಿತ ಹಣ ಪ್ರಮಾಣವಾಗಿ ಮಾರ್ಪಾಡಾಗುವುದು. ನಗದು ರಹಿತ ಅರ್ಥಿಕತೆಯು ಭಾರತದಲ್ಲಿ ದಾಖಲೆ ರಹಿತ ಹಣದ ರೂಪವನ್ನು ಸಂಪೂರ್ಣವಾಗಿ ತಡೆಗಟ್ಟುತ್ತದೆ. ಇದರಿಂದ ಹಣದ ರೂಪವು ಸಂಪೂರ್ಣ ದಾಖಲೆಯಾಗಿ ಕಪ್ಪುಹಣದ ನಿಯಂತ್ರಣ ಸಾಧ್ಯವಾಗುತ್ತದೆ. ಇದರಿಂದ ಕಪ್ಪು ಹಣಮುಕ್ತ ಭಾರತ ಸೃಷ್ಠಿಯಾಗುತ್ತದೆ. 
ಭಾರತದಲ್ಲಿ ನಗದು ರೂಪ ವ್ಯವಹಾರವು, ಹೆಚ್ಚು ಭಯೋತ್ಪಾದನೆ, ದರೋಡೆ, ಕೊಲೆ, ಸುಲಿಗೆ - ಈ ಎಲ್ಲಾ ಚಟುವಟಿಕೆಗಳಿಗೆ ಎಡೆ ಮಾಡುತ್ತದೆ. ನಗದು ರಹಿತ ಆರ್ಥಿಕತೆಯಿಂದ 70% ಕಡಿತಗೊಳ್ಳಲಿದೆ ಎಂದು ಕೇಂದ್ರ ಸರ್ಕಾರವು ಪ್ರಕಟಿಸಿದೆ. 
ಭಾರತದಲ್ಲಿ ಪ್ರತೀ ವರ್ಷ ನೋಟನ್ನು ಮುದ್ರಿಸಲು ಹೆಚ್ಚು ವ್ಯಯವಾಗುತ್ತದೆ, ಹಾಗೂ ಇದರಿಂದ ಪ್ರತೀವರ್ಷ ಆರ್.ಬಿ.ಐ. ನೀತಿಯ ಮೇಲೆ ಪರಿಣಾಮ ಬೀರುತ್ತದೆ. ನಗದು ರಹಿತ ಆರ್ಥಿಕತೆಯನ್ನು ಪ್ರತಿಯೊಬ್ಬರೂ ಬಳಸಬೇಕು. ಹಾಗೂ ಜನರಿಗೂ ಸಹ ನೋಟಿನ ಭಾರವು ಸಂಪೂರ್ಣವಾಗಿ ಕಡಿತಗೊಂಡು ಅಂತರ್ಜಾಲ, ಸಂಪರ್ಕ ಸಾಧನಗಳ ಮುಖಾಂತರ ದೇಶದಲ್ಲಿ ಇ-ಆಡಳಿತದೊಂದಿಗೆ ಇ- ಹಣಕಾಸು ಯಶಸ್ವಿಯಾಗುತ್ತದೆ. 
 ನಗದು ರಹಿತ ಆರ್ಥಿಕತೆಯು ಸಾಧ್ಯವಾಗುವ ಸಂಪೂರ್ಣ ಮಾರ್ಗವು ಅಂತರ್ಜಾಲ ಹಾಗೂ ತಂತ್ರಜ್ಞಾನ. ಇದಕ್ಕಾಗಿ ವ್ಯಕ್ತಿಯ, ಸರ್ಕಾರಿ ಅಥವಾ ಖಾಸಗೀ ಸಂಸ್ಥೆಗಳ ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಮಾಹಿತಿ ಸೋರಿಕೆಯಾಗುವಂತಹ ಹೆಚ್ಚಾಗಿರುತ್ತದೆ. 
ಭಾರತೀಯ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಇದನ್ನು ಅಳವಡಿಸಿಕೊಂಡು ಎಲ್ಲಾ ಜನಸಾಮಾನ್ಯರ ಮಟ್ಟಕ್ಕೆ ತಲುಪುವಂತೆ ಮಾಡುವಷ್ಟರಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಮಯದ ಅಭಾವ ಹಾಗೂ ಇತರೆ ದಾಖಲೆಗಳ ಅಡೆ ತಡೆಗಳು ಎದುರಾಗುತ್ತವೆ. 
ಭಾರತವು ಹೆಚ್ಚಿನ ಪ್ರಮಾಣದಲ್ಲಿ ಹಳ್ಳಿಗಳನ್ನು ಹೊಂದಿದ್ದು, ರೈತರು ಹಾಗು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು ನಗದು ರಹಿತ ಆರ್ಥಿಕತೆಯ ನಿರ್ವಹಣೆಯಲ್ಲಿ ತೊಂದರೆ ತೊಡಕುಗಳು ಉಂಟಾಗುತ್ತವೆ. ಹಾಗಾಗಿ ಭಾರತದಲ್ಲಿ ಪ್ರಸ್ತುತ ದಿನದಲ್ಲಿ ನಗದು ರಹಿತ ಆರ್ಥಿಕತೆಯು ಸಾಧ್ಯವಾಗಲು ಜನಸಾಮಾನ್ಯರ ಮಟ್ಟದಲ್ಲಿ ಹೆಚ್ಟು ತೊಡಕುಗಳಿವೆ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ. 
 ಉದ್ದೇಶ, ಅನುಕೂಲ, ಅನಾನೂಕೂಲಗಳನ್ನು ಹೊಂದಿರುವಂತಹ ಭಾರತೀಯ ನಗದು ರಹಿತ ಆರ್ಥಿಕತೆಯು ಹಲವು ಗಾವುದಗಳ ದೂರ ಸಾಗಿ ಬರಬೇಕಾದ ಅಗತ್ಯತೆ ಇದೆ.
 ನಗದು ರಹಿತ ಆರ್ಥಿಕತೆಯ ಪ್ರಯೋಜನಗಳನ್ನು ಸಾಮಾನ್ಯರ ಜನರ ಮಟ್ಟಿಗೆ ತಲುಪಿಸುವುದು, ಅಂದರೆ ಗ್ರಾಮೀಣ ಮಟ್ಟದಲ್ಲಿ ಇದರ ಎಲ್ಲಾ ಪ್ರಮುಖ ಪ್ರಯೋಜನಗಳನ್ನು ಪ್ರಚಾರ ಮಾಡುವುದು. ಅಣುಕು ತರಬೇತಿಗಳನ್ನು ನೀಡುವುದು ಹಾಗೂ ಇದರ ಕಾರ್ಯನಿರ್ವಹಣೆ ಉದ್ದೇಶವನ್ನು ಸ್ಪಷ್ಟಪಡಿಸುವುದು ದೊಡ್ಡ ಪ್ರಮಾಣದಲ್ಲಿ ಆಗಬೇಕಿದೆ. 
- ಭಾರತದಲ್ಲಿ ನಗದು ರಹಿತ ಬ್ಯಾಂಕಿಂಗ್ ವ್ಯವಸ್ಥೆಯ ಹೆಚ್ಚು ಅಗತ್ಯತೆ ಇದೆ ಅಂದರೆ, ನಗದು ರಹಿತ ಅರ್ಥಿಕತೆಯು ಸಂಪೂರ್ಣವಾಗಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚು ಅನುಕೂಲಗಳು ಅಧಿಕ ಬ್ಯಾಂಕ್ ಸೌಲಭ್ಯಗಳು ಹಾಗೂ ಎ.ಟಿ.ಎಮ್. ಹಾಗೂ ಇತರ ಸಾಧನಗಳಲ್ಲಿ ಪ್ರಮಾಣದಲ್ಲಿ ಹೆಚ್ಚಳವಾಗಬೇಕು. ನೂತನ ಯೋಜನೆಗಳು ಇದರ ತರದಲ್ಲಿ ಕೈಗೊಳ್ಳಬೇಕು. 
.ಭಾರತದಲ್ಲಿ ನಗದು ರಹಿತ ಆರ್ಥಿಕತೆಯು ಸಾಧ್ಯವಾಗಬೇಕಾದರೆ, ಮಾರುಕಟ್ಟೆ ಸಾಮಾನ್ಯರ ವ್ಯವಹಾರಗಳಲ್ಲಿ ಅಧಿಕ ಬಳಕೆ ಆಗಬೇಕು ಹಾಗೂ ಸಮಾಜದ ಪ್ರತಿಯೊಬ್ಬರಿಗೂ ಇದರ ತಿಳುವಳಿಕೆ ತಲುಪಬೇಕು.
ನಗದು ರಹಿತ ಮಾರುಕಟ್ಟೆಯ ಕುರಿತು ಸಂಶೋಧನೆಗಳು ಸಾಗಬೇಕು. ಸರ್ಕಾರಜನಸಾಮಾನ್ಯರ ಪರವಾಗಿ ಕಾರ್ಯಗೈಯಬೇಕು ಹಾಗು ಇದರ ಸಂಬಂಧಿತ ತೊಡಕುಗಳನ್ನು ನಿವಾರಿಸುವ ಕಾರ್ಯತಂತ್ರಗಳನ್ನು ರೂಪಿಸಬೇಕು.
ಜಾಗತಿಕ ಮಟ್ಟದಲ್ಲಿ ಭಾರತವು ಪ್ರಬಲ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಇದರ ಜೊತೆಯಲ್ಲಿ ಆರ್ಥಿಕತೆಯಲ್ಲಿಯೂ, ತನ್ನ ಅಭಿವೃದ್ಧಿಯನ್ನು ಸಾಧ್ಯ ಮಾಡಬೇಕಾದರೆ, ಇ-ಆಡಳಿತ, ಇ- ಹಣಕಾಸು ಹಾಗೂ ಇತರ ಆಧಿನಿಕ ಯೋಜನೆಗಳನ್ನು ಕೈಗೊಳ್ಳುವುದು ಸಹ ಅಷ್ಟೇ ಪ್ರಮುಖ ಅಂಶವಾಗುತ್ತದೆ. ಹಾಗಾಗಿ ನಗದು ರಹಿತ ಆರ್ಥಿಕತೆಯು ಒಂದು ಉತ್ತಮ ಆಭಿವೃದ್ಧಿ ಕಲ್ಪನೆಯಾಗಿದ್ದು ಇದು ವಾಸ್ತವದಲ್ಲಿಯೂ ಯಶಸ್ವಿಯಾಗುವುದು ಸಹ ಅಷ್ಟೇ ಮುಖ್ಯವಾಗುತ್ತದೆ. ಸದೃಢ ಭಾರತ ಆರ್ಥಿಕತೆಗೆ ಹಾಗೂ ಜಾಗತಿಕ ಮಟ್ಟದಲ್ಲಿ ಆರ್ಥಿಕ ಪೈಪೋಟಿಗೆ ನಗದು ರಹಿತ ಆರ್ಥಿಕತೆಗೆ ಆರೋಗ್ಯಕರ ವಿಷಯವಾಗಿದೆ. 

 

LOOKING FOR KAS, PSI, KPSC, BANKING & SSC EXAM
PREPARATION IN BANGALORE ?

LOOKING FOR KAS, PSI, KPSC, BANKING & SSC EXAM PREPARATION IN BANGALORE ?

Contact Us Now