Essay
ದಯಾಮರಣ
“ಓ ಮೃತ್ಯು ಬೆಕ್ಕಿನೊಲು ಬಾರದಿರು ಕೊಲೆಗಾರನಂತೆ, ಬಾ ಪ್ರತಿಯೊಬ್ಬನಿಗೂ ತಕ್ಕಂತೆ, ವೀರನಿಗಾಗಿ ವೀರಮರಣ ಕವಿಗಾಗಿ ದೀಪ್ತಿಯ ಜ್ವಾಲೆಯಂತೆ, ನನಗಾಗಿ ಕೊಡುವುದಾದರೆ ಕೊಡು ಸುಖದ ಮರಣವನ್ನು” ಹೀಗೆಂಬುದು ಅನೇಕರ ಪ್ರಾರ್ಥನೆ. ಬದುಕು ಎಂದೂ ಬವಣೆ ಆದರೆ ಸಾವು ಸುಖವಾಗಿ ಬರಬೇಕೆಂದು ಎಲ್ಲರೂ ಕೋರುವವರು.ಪ್ರಸ್ತತ ಭಾರತದಲ್ಲಿ “ದಯಾಮರಣ” ಹೆಚ್ಚು ಚರ್ಚೆಯಲ್ಲಿರುವ ಸಂತಿಯಾಗಿದೆ.ಸರ್ವೋಚ್ಛ ನ್ಯಾಯಾಲಯದ 2018 ಮಾರ್ಚ್‍ನ ತೀರ್ಪು ಹೆಚ್ಚು ಸಾರ್ವನಿಕ ಗಮನ ಸೆಳೆದಿದೆ.
“ದಯಾಮರಣ” ವೆಂದರೆ ಬದುಕನ್ನು ಬಲವಂತವಾಗಿ ಅಂತ್ಯಗೊಳಿಸುವುದೆಂದು.ತಡೆಲಸಾಧ್ಯವಾದ ನೋವು, ಖಾಯಿಲೆ ಅಥವಾ ಮೆದುಳು ಸತ್ತ ಸ್ಥಿತಿಯಲ್ಲಿ ಬದುಕು ಮುಂದುವರಿಯಲು ಅಸಾಧ್ಯವೆನಿಸಿದಾಗ ಬದುಕನ್ನು ಕಡೆಗಣಿಸುವುದು. ‘ದಯೆ ತೋರಿ’ ಮರಣ ಮಂಜೂರು ಮಾಡುವುದೇ “ದಯಾ ಮರಣ” 
ಜಗತ್ತಿನಾದ್ಯಂತ ವಿವಿಧ ರೂಪಗಳಲ್ಲಿ ಇತಿಹಾಸದ ಪುಟಗಳಲ್ಲಿ ಕಾಣಸಿಗುತ್ತವೆ. ದಯಾಮರಣದ ಪ್ರತಿಪಾದನೆಗಳು 20-21ನೇ ಶತಮಾನವದಲ್ಲಿ ಒಂದು ಹೊಸ ಪರಿಭಾಷೆ ಅಥವಾ ವ್ಯಾಖ್ಯಾನವನ್ನು ಆರಂಭಿಸಿತು. ಅದಕ್ಕೆ ಕಾನೂನಿನ ಸ್ವರೂಪ, ನಿಯಂತ್ರಣ ಮಾಡಲಾರಂಭಿಸಿತು.ಭಾರತದಲ್ಲಿ “ದಯಾಮರಣ, ಹೊಸತೇನೂ ಅಲ್ಲ, ಸಂಸ್ಕøತಿದಲ್ಲೂ ಇದರ ಉಲ್ಲೇಖಗಳಿವೆ, “ಸ್ವಚ್ಛಂದ ಮೃತ್ಯು” “ಅನಾಯಾಸ ಮರಣ” - ಹೀಗೆಲ್ಲಾ ವ್ಯಾಖ್ಯಾನವಿದೆ.ಮಹಾಭಾರದ ಪ್ರಸಂಗಗಳಲ್ಲಿ ಪ್ರಮುಖವಾದ ಒಂದನ್ನು ಪ್ರಸ್ತಾಪಿಸ ಬೇಕೆಂದರೆ, ಭೀಷ್ಮಾಚಾರ್ಯರು ಇಚ್ಛಾ ಮರಣಿಗಳಾಗಿದ್ದು ಶರಶಯ್ಯಯಲ್ಲಿ ಮರಣವನ್ನಪ್ಪಿದರು.ಹೀಗೆ ಬೇಕೆನಿಸಿದಾಗ ಮರಣ ಹೊಂದುವುದು ಅಥವಾ ಬದುಕು ಸಾಕೆನಿಸಿದಾಗ ಅಂತ್ಯಗೊಳಿಸುವುದು ದಯಾಮರಣದ ಇನ್ನೊಂದು ಮುಖವಾಗಿದೆ.ಆಧುನಿಕ ಯುಗದಲ್ಲಿ, ಫ್ರಾನ್ಸಿಸ್ ಬೇಕನ್‍ರವರು” ಯೂಥನೇಷಿಯಾ” (
EUTHANASIA) ಎಂಬ ಪದವನ್ನು 17ನೇ ಶತಮಾನದಲ್ಲಿ ಮೊದಲಿಗೆ ಬಳಸಿದ್ದಾರೆ.
ಇದು “ದಯಾಮರಣ” ಪದದ ಇಂಗ್ಲೀಷ್ ರೂಪವಾಗಿದೆ.ಪದದ ಅರ್ಥದ ಮೂಲವನ್ನರಿಸಿ ಹೊರಟರೆ ಗ್ರೀಕ್ ಭಾಷೆಯ ಪದಗಳನ್ನು ಆಧರಿಸಿ ಇಂಗ್ಲೀಷ್ ಭಾಷೆಗೆ ಸರಿ ಹೊಂದಿಸಿದೆ.ಎನ್ನಬಹುದು.ಪದದ ಮೂಲವೇನೇ ಇರಲಿ. ಅರ್ಥ ಮಾತ್ರ ಬಹಳ ಕ್ಲಿಷ್ಟಕರ, ಅಂದರೆ “ದಯಾಮರಣ”  ಒಂದು ಸಂಕೀರ್ಣ, ಪ್ರತಿಪಾದಾತ್ಮಕ. ಸೂಕ್ಷ್ಮ ಭಾವನಾತ್ಮಕ ವಿಷಯವೆಂದರ್ಥ.ಇದನ್ನು ಪ್ರಮುಖವಾಗಿ ಮೂರು ವಿಧಗಳಾಗಿ ವಿಭಜಿಸಲಾಗಿದೆ.
1. ಸ್ವ ಇಚ್ಛೆಯಿಂದ ಮರಣವನಪ್ಪುವುದು. 
2. ಇತತರ ಬಲವಂತದ ಮೇರೆಗೆ ಮರಣವನಪ್ಪುವುದು.
3. ಇಚ್ಛೆ ವ್ಯಕ್ತ ಪಡಿಸಲಾಗದ ನಿಶ್ಚೇತ ಸ್ಥಿತಿಯಲ್ಲಿರುವುದು..
    ಇದನ್ನು ಮುಂದುವರೆಸಿ, ಪ್ರತಿಯೊಂದುನ್ನೂ ಸಕ್ರಿಯ ಮತ್ತು ನಿಷ್ಕ್ರಿಯ  ಎಂದು ವಿಭಜಿಸಲಾಗಿದೆ. ದಯಾಮರಣ ಕೇವಲ ಸಹಿಸಲು ಸಾಧ್ಯ ಸ್ಥಿತಿಯಲ್ಲಿರುವ ರೋಗಿಗಳನ್ನು ಕುರಿತೇ ಚರ್ಚಿಸಲಾಗುತ್ತದೆ. ಇದಕ್ಕೆ ಮತ್ತೊಂದು ಆಯಾಮ ದೊರೆತ್ತು, “ಜೀವಿಸುವ ಹಕ್ಕು” ಅಥವಾ “ಜೀವಿಸುವ ಇಚ್ಛೆ” (
living will) ಎನ್ನುವ ಪದ ಬಳಕೆಯ ಮುಖೇನ ಇತ್ತೀಚಿನ ತೀರ್ಪು ಸರ್ವೋಚ್ಛ ನ್ಯಾಯಾಲಯದಿಂದ ಬಂದಿದೆ.
ದಯಾಮರಣದ ಆಧುನಿಕ ಇತಿಹಾಸದ ಪುಟಗಳನ್ನೊಮ್ಮೆ ತೆರೆದರೆ, ದಾಖಲಿಸಿದ ಪುರಾವೆ 1928ರಲ್ಲಿ ಮೊದಲ ಸಾರ್ವಜನಿಕ ಚರ್ಚೆ ಭಾರತದಲ್ಲಾಯಿತು. ಮಹಾತ್ಮಾ ಗಾಂಧೀಜಿಯವರ ಆಶ್ರಮದಲ್ಲಿ ಇದ್ದ ಒಂದು ಕರು ಅತೀವ ನೋವು ಬಾಧೆಗಳೆಂದ ನರಳುತ್ತಲಿತ್ತು.ನಿಶ್ಚೇತ ಪರಿಸ್ಥಿತಿಯಲ್ಲಿ ಮಲಗಿದ್ದಲ್ಲೇ ಮಲಗಿತ್ತು.ಮೈಮೇಲಿನ ಹುಣ್ಣು, ರಕ್ತ, ಕೀವುಗಳ ಸೋರಿಕೆ, ಸುತ್ತುಲೂ ಕಿತ್ತು ತಿನ್ನುವ ನೊಣಗಳು, ನೋಡಲೇ ಕಷ್ಟಕರವೆನಿಸುವಂತ್ತಿತ್ತು.ಆಶ್ರಮದ ಆ ಕರುವಿಗೆ ಸಾವು ಹೆಚ್ಚು ಸೂಕ್ತವೆಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಸಲಹೆಯನಿತ್ತರು.ಗಾಂಧೀಜಿಯವರು ಇದಕ್ಕೆ ಸಮ್ಮತಿಸಿದರು.ಅಂದರೆ, ಅಂದಿನಿಂದ ಎಲ್ಲಾ ಚಿಕಿತ್ಸೆಗಳನ್ನು ಸ್ಥಗಿತಗೊಳಿಸಿದರು.ನಿಷ್ಕ್ರಿಯ ದಯಾಮರಣಕ್ಕೆ” ದಾರಿಯಾದಂತೆ ಆಯಿತು.ಇದನ್ನು ಗೋಸೇವರ ಸಂಘ ಹಾಗೂ ಆಶ್ರಮವಾಸಿಗಳೇ ವಿರೋಧಿಸಿದರು, ಆದರೂ, ಗಾಂಧೀಜಿ, ಎಂದೂ ಸರಿಪಡಿಸಲಾರದ ನೋವಿನ ಬದುಕಿಗಿಂತ, ಸುಖದ ಸಾವೇ ಲೇಸೆಂದು ವಾದಿಸಿದರು.ಅವರು ಅಂದಿನ ಪತ್ರಿಕೆಗಳಾದ ‘ನವ್‍ಜೀವನ್” ಹಾಗು “ಯಂಗ್ ಇಂಡಿಯಾ”ದಲ್ಲಿ ತಮ್ಮ ಈ ವಿಷಯದ ಬಗೆಗಿನ ತಮ್ಮ ಮನದಾಳದ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.ಇದೇ ಭಾರತದ ಮೊಟ್ಟಮೊದಲು “ದಯಾಮರಣದ” ಬಗೆಗಿನ ಸಾರ್ವಜನಿಕ ಚರ್ಚೆಯಾಯಿತು.ನಂತರ 1932 ರಲ್ಲಿ ಎರವಾಡದಲ್ಲಿ ಇಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂತು .ಗಾಂಧೀಜಿಯವರು ಪ್ರಾಣಿ ಮರಣಕ್ಕೆ ಸಮ್ಮತಿ ಸೂಚಿಸಿದ್ದು, ಮನುಷ್ಯರಿಗೂ ಅನ್ವಯವೇ ಎಂದು ಪ್ರಶ್ನೆಸಿದಾಗ ಖಂಡಿತವಾಗಿ ಹೌದೆಂದಿದ್ದರು.ಅನೇಕರು ಇದನ್ನು ಅವರ ಅಹಿಂಸಾತತ್ವಕ್ಕೆ ವಿರೋಧವೆಂದು ಅಪಹಾಸ್ಯ ಮಾಡಿದ್ದೂ ಉಂಟು.ಆದರೆ ಗಾಂಧೀಜಿಯವರ ಮತ್ತೊಂದು ಮುಖವನ್ನು 1935ರಲ್ಲಿ ಕಂಡು ಸಮ್ಮನಾದರು.ಒಬ್ಬ ಕುಷ್ಠರೋಗಿ, ತಮ್ಮಗೆ ಖಾಯಿಲೆಯ ಅತೀವ ಸಂಕಟ ಬದುಕನ್ನು ದುಸ್ಥರವಾಗಿಸಿದೆ.ಸಾಯಲು ಮನೆಯಲ್ಲಿ ಯಾರೂ ಒಪ್ಪಿಗೆ ನೀಡುತ್ತಿಲ್ಲ ಎಂದು ಗಾಂಧೀಜಿಗೆ ಪತ್ರ ಬರೆದರು.ಸಾವಿಗೆ ಸಮ್ಮತಿಸಿದಂತೆ ಸೂಚಿಸಿ, ತಮ್ಮ ಆಶ್ರಮಕ್ಕೆ ಅವರನ್ನು ಬರಮಾಡಿಕೊಂಡ ಗಾಂಧೀಜಿ, ಸ್ವತಃ ಸೆವೆಗೈದು ಬದುಕಿಸುವ ಪ್ರಯತ್ನಗಳಿಗೆ ಪೂರಕವಾಗಿ ನಿಂತರು. ಇಲ್ಲಿ ಗಾಂಧೀಜಿ, ದಯಾಮರಣದ ಸಂಪೂರ್ಣ ಅರ್ಥಗ್ರಹಿಕೆ  ಮತ್ತು ಅನಿವಾರ್ಯವಾದಲ್ಲಿ ಮಾತ್ರ ಬಲವಂತದ ಸಾವಿಗೆ ಸಮ್ಮತಿ ಎಂದು ಕಾರ್ಯರೂಪದಲ್ಲಿ ಪ್ರತಿಪಾದಿಸಿದ್ದರು. 1944ರಲ್ಲಿ ಅವರ ಪತ್ನಿ ಕಸ್ತೂರ ಬಾ ಅತ್ಯಂತ ನರಳಾಟದಲ್ಲಿದ್ದಾಗ, ಅವರ ಮುಗನನ್ನು ಇನ್ನಷ್ಟು ಚುಚ್ಚುಮದ್ದುಗಳನ್ನು ಅಳವಡಿಸದಂತೆ ಮನವರಿಕೆ ಮಾಡಿಸಿದರು.ಹೀಗೆ ಅನೇಕರ ಪ್ರಕರಣಗಳು ಬೆಳಕಿಗೆ ಬಂದೂ ಬಾರದಂತೆ ಸಾಗುತ್ತಲೇ ಇದೆ, ಇರುತ್ತದೆ ಕೂಡ ಭಾರತದಲ್ಲಿ ಸಕ್ರಿಯ ದಯಾಮರಣ ಶಿಕ್ಷಾರ್ಹ ಅಪರಾಧ, ಅಂದರೆ ವಿಷಪೂರಿತ ಚುಚ್ಚು ಮದ್ದು ನೀಡುವುದು ಅಥವಾ ಇನ್ಯಾವುದೇ ಬಲವಂತದ ಬಾಹ್ಯ ವಿಧಾನಗಳನ್ನು ಬಳಸಿ ಸಾವಿಗೆ ದೂಡಿದರೆ, ಅದು “ಕೊಲೆ’ ಅಪರಾಧವಾಗುತ್ತದೆ.
2009 ರಲ್ಲಿ ಸರ್ವೋಚ್ಛ ನ್ಯಾಯಾಲಯದ ಮುಂದೆ ಬಂದ “ಅರುಣಾ ಶಾನ್‍ಭಗ್” ಪ್ರಕರಣ, ದಯಾಮರಣದ ಬಗೆಗಿನ ಹೆಚ್ಚಿನ ವಿಷಯಗಳನ್ನು ಕಲಕಿತು.ಪಿಂಕಿ ವಿರಾನಿ ಎಂಬಾಕೆ “ನೆಕ್ಸ್ಟ್ ಫ್ರೆಂಡ್” ಎಂಬ ಮಾತಿನ ಮುಖೇನ, ತನ್ನ ಗೆಳತಿಗೆ ಯಾರೂ ಇಲ್ಲವೆಂದು, ಲೈಂಗಿಕ ದೌರ್ಜನ್ಯಕ್ಕೆ 1973ರಲ್ಲಿ ಒಳಗಾದಾಗಿನಿಂದ, ಸಸ್ಯಕ ಸ್ಥಿತಿಯಲ್ಲಿ, ಎಂದರೆ ಜೀವನ ಶವವಾಗಿ ಇರುವುದನ್ನು ಬೆಳಕಿಗೆ ತಂದು, ದಯಮರಣ ಕೋರಿ ಮುಂಬೈ ಉಚ್ಛನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಇಲ್ಲಿ ಒಪ್ಪಿದ ವಿಷಯದ ವಿರುದ್ಧ ಮತ್ತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಯಿತು.3 ಸದಸ್ಯ ಪೀಠ ಈ ವಿಷಯವನ್ನು 5 ಸದಸ್ಯ ಪೀಠಕ್ಕೆ ವರ್ಗಾಯಿಸಿ, ಮಾರ್ಚ್ 7 2011ರಂದು ನಿಷ್ಕ್ರಿಯ ದಯಾಮರಣಕ್ಕೆ ಸರ್ವೋಚ್ಛ ನ್ಯಾಯಾಲಯ ಸಮ್ಮತಿಸಿದೆ.ಮುಂದುವರೆದಂತೆ 2014ರ ಡಿಸೆಂಬರ್‍ನಲ್ಲಿ ಇಂತಹ ಮರಣವನ್ನು ಕ್ರಿಮಿನಲ್ ಪ್ರೋಸೀಡ್ಜ್‍ರ್ ಕೋಡ್‍ನ 309ನೇ ಸೆಕ್ಷನ್ ಅಡಿ ಸೇರಿಸಬಾರದೆಂದು ತಿಳಿಸಿದೆ.ಇದೀಗ 2018ರ ಮಾರ್ಚ್‍ನಲ್ಲಿ ಬಂದಿರುವ ಮತ್ತೊಂದು ನಿರ್ಣಯ “ಜೀವಿಸುವ ಇಚ್ಛೆ’ ಎಂದಾಗಿದೆ. ಮುಂಬೈನಲ್ಲಿ ವಾಸವಾಗಿರುವ ನಾರಾಯಣಲಾವಟಿ’ ದಂಪತಿಗಳು, ಸರ್ವೋಚ್ಛ ನ್ಯಾಯಾಲಯವನ್ನು ಮೊರೆಹೊಕ್ಕಿದ್ದಾರೆ, ಅವರು ಮಕ್ಕಳಿಲ್ಲದ ದಂಪತಿಗಳಾಗಿದ್ದು, ಈಗ 80-90 ಅಂಚಿನ ವಯೋಮಾನದಲ್ಲಿದ್ದಾರೆ, ಹಾಗಾಗಿ ಜೀವಿಸಿದಷ್ಟು ವರ್ಷಗಳೂ ಸಮಾಜಕ್ಕೆ ಸಾಧ್ಯವಾದ ಸೇವೆ ಸಲ್ಲಿಸಿದ್ದು, ಈಗ ವಯೋಧರ್ಮದ ಕಾರಣ ಸೇವೆಗೈಯಲು ಆಗುತ್ತಿಲ್ಲ. ಅಂತೆಯೇ ನೋಡಿಕೊಳ್ಳುವವರೂ ಇಲ್ಲ. ಖಾಯಿಲೆ ಬಂದು ನರಳುವಸ್ಥಿತಿ ತಲುಪುವ ಮೊದಲೇ ಭೂಮಿಯ ಭಾರ, ಸಮಾಜದ ಭಾರವನ್ನು ತಗ್ಗಿಸುವಂತೆ ಕೋರಿ ಅರ್ಜಿ ಸಲಿಸಿರುತ್ತಾರೆ. ಇದರ ಪರಿಶೀಲನೆ ಮತ್ತು ತೀರ್ಪಿನನ್ವಯ “ದಯಾಮರಣ ಪ್ರಸ್ತುತಸಾಗಿ ಬಂದಿದೆ.
   ಬಹಳ ಕಟ್ಟು ನಿಟ್ಟಿನ ಚಾಕಟ್ಟಿನಲ್ಲಿ, ಕಾನೂನಿನ ಕಣ್ತಪಿಸದೆ, ಸಾಗಬೇಕಾಗಿದರು “ನಿಷ್ಕ್ರಿಯ ದಯಾಮರಣ”  ಭಾರತದಲ್ಲೀಗ ಕಾನೂನು ಸಮ್ಮತ ಮುಂಬರುವ ದಿನಗಳಲ್ಲಿ ಬದುಕು ಅಗ್ಗವಾಗದೇ, ಮೃತ್ಯು ಮೌಲ್ಯ ಕಾಯ್ದಿರಿಸಿಕೊಳ್ಳಲಿ ದಯಾಮರಣ ದಿಕ್ಕು ತಪ್ಪದಿರಲಿ, “ಜೀವಿಸುವ ಹಕ್ಕು ಮತ್ತು ಇಚ್ಛೆ” ಸ್ವಚ್ಛಂದವಾಗಿರಲೆಂಬುದು ಆಶಯ. 

LOOKING FOR KAS, PSI, KPSC, BANKING & SSC EXAM
PREPARATION IN BANGALORE ?

LOOKING FOR KAS, PSI, KPSC, BANKING & SSC EXAM PREPARATION IN BANGALORE ?

Contact Us Now